ನಾಡಿನ ಜನತೆಯ ಒಳಿತಿಗಾಗಿ ಈದ್ ಉಲ್ ಅಝ್ಹಾ ನಮಾಝ್ ನಲ್ಲಿ ಪ್ರಾರ್ಥನೆ
ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸೇರಿ ಹಲವರು ಭಾಗಿ
ಕೊಪ್ಪಳ : ನಾಡಿನ ಜನತೆಯ ಒಳಿತಿಗಾಗಿ ಈದ್ ಉಲ್ ಅಝ್ಹಾ ನಮಾಝ್ ನಲ್ಲಿ ಪ್ರಾರ್ಥಿಸಲಾಯಿತು.
ನಗರದ ಹಳೆ ಜಿಲ್ಲಾ ಆಸ್ಪತ್ರೆ ಪಕ್ಕದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಈದ್ ಉಲ್ ಅಝ್ಹಾ ಹಬ್ಬದಲ್ಲಿ ಇಮಾಮ್ ಹಾಫೀಝ್ ಮೊಹಮ್ಮದ್ ಆಸಿಫ್ ಖಾಝಿ ಅವರು ಸಾಮೂಹಿಕ ನಮಾಝಿನಿ ಬಳಿಕ ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲಿ. ಒಳ್ಳೆಯ ಮಳೆ ಬರಲಿ ಚೆನ್ನಾಗಿ ಬೆಳೆಯಲಿ. ಭೂಮಿ ಮೇಲಿರುವ ಜೀವರಾಶಿಗಳಿಗೆ ನೀರು. ಆಹಾರ ಸಿಗುವಂತಾಗಲು ಪ್ರಾರ್ಥಿಸಿ. ಬಕ್ರೀದ್ ಹಬ್ಬ ಅಂದರೆ ಕೇವಲ ಪ್ರಾಣಿ ಬಲಿ ಅಷ್ಟೇ ಅಲ್ಲ. ಮನುಷ್ಯನಲ್ಲಿರುವ ಅಸೂಯೆ. ಇನ್ನೊಬ್ಬರ ಬಗ್ಗೆ ಕೆಟ್ಟದನ್ನು ಬಯಸುವುದನ್ನು. ವೈಷಮ್ಯ. ವೈಶ್ಯವಾಟಿಕೆ.ಕುಡಿತ.ಜೂಜು ಮುಂತಾದ ದುಶ್ಚಟಗಳನ್ನು ಬಿಡುವ ಮೂಲಕ ತ್ಯಾಗ(ಖುರ್ಬಾನಿ) ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೊಹಮ್ಮದ್ ಅಬ್ಬಾಸ್ ಅಲಿ ಖಾಝಿ. ಸಮುದಾಯದ ಮುಖಂಡರಾದ ಪೀರಾ ಹುಸೇನ್ ಮುಜಾವರ್. ನ್ಯಾಯವಾದಿ ಎಸ್ ಆಸಿಫ್ ಅಲಿ. ಮಾನ್ವಿ ಪಾಷಾ. ಆಸಿಫ್ ಖಾನ್. ಕಾಟನ್ ಪಾಶಾ. ಇಝಾರತ್ ಅಲಿ. ಕೆ.ಎಂ.ಸೈಯದ್. ಅಮ್ಜದ್ ಪಟೇಲ್. ಝಹಿರ್ ಅಲಿ.ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಪಾಲಕರ ಹೋರಾಟ ಸಮಿತಿಯ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ. ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್ ಹಾಗೂ ಶಾಸಕ ಕೆ.ರಾಘವೇಂದ್ರ ಬಿ. ಹಿಟ್ನಾಳ. ನೂತನ ಸಂಸದ ರಾಜಶೇಖರ್ ಬಿ. ಹಿಟ್ನಾಳ. ಮುಖಂಡ ಅಮರೇಶ ಕರಡಿ. ಪ್ರಸನ್ನ ಗಡಾದ್. ಯಮನೂರಪ್ಪ ಟಣಕನಕಲ್. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಜಯಪ್ರಕಾಶ್ ಸೇರಿದಂತೆ ಅನೇಕರು ಮುಸ್ಲಿಮರೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
Comments are closed.