ಕಿನ್ನಾಳ ಬಾಲಕಿಯ ಕೊಲೆ ಪ್ರಕರ ಭೇದಿಸಿದ ಪೊಲೀಸರು : ಆರೋಪಿ ಬಂಧನ
ಗುಟ್ಕಾ ತರಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಮಗುವನ್ನು ಕೊಂದ ಕ್ರೂರಿ
ಕೊಪ್ಪಳ : ಕೊಪ್ಪಳ ಗ್ರಾಮೀಣ ರಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಕು.ಅನುಶ್ರೀ ಎನ್ನುವ ಬಾಲಕಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಯಷೋಧ ವಂಟಗೋಡಿ ಹೇಳಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಿನ್ನಾಳ ಗ್ರಾಮದ ಅನುಶ್ರೀ ಕೊಲೆ ಪ್ರಕರಣ ಕುರಿತು ಮಾಹಿತಿ ನೀಡಿದರು.
ಅನುಶ್ರೀ ಎನ್ನುವ ಬಾಲಕಿಯನ್ನು ಯಾರೋ ಅಪಹರಣ ಮಾಡಿಕೊಂಡು ಹೊದ ಬಗ್ಗೆ ಬಾಲಕಿಯ ತಂದೆ ರಾಘವೇಂದ್ರ ಮಡಿವಾಳರ ದೂರು ನೀಡಿದ್ದರು. ( ದಿ-20.04.2024 ರಂದು ಕೊಪ್ಪಳ 20-24/2024 600-363 . ಮಡಿವಾಳರ ವಯ:07)
ಈಕೆಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ ಸಾಯಿಸಿ ಗೊಬ್ಬರ ಚೀಲದಲ್ಲಿ ಹಾಕಿ ಬಾಯಿ ಕಟ್ಟಿ ಮನೆಯ ಹಿಂದಿನ ಖಾಲಿ ಜಾಗೆಯಲ್ಲಿ ಎಸೆದು ಹೋದ ಬಗ್ಗೆ ಫಿರ್ಯಾದಿದಾರರು ಪುನಃ ಹೇಳಿಕೆ ನೀಡಿದ್ದರು.
ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತರ ಸುಳಿವೆ ಇಲ್ಲದ ಪ್ರಕರಣ ಭೇದಿಸಲು SP ಶ್ರೀಮತಿ ಯಶೋಧಾ ವಂಟಗೋಡಿ ASP ಹೇಮಂತ್‌ಕುಮಾರ ಆರ್. , DSP ಮುತ್ತಣ ಸರವಗೋಳ ಕೊಪ್ಪಳ ಉಪ-ವಿಭಾಗ, ಮಾರ್ಗದರ್ಶನದಲ್ಲಿ ಆಂಜನೇಯ ಡಿ.ಎಸ್ ಪಿ.ಐ ಮಹಿಳಾ ಠಾಣೆ ಕೊಪ್ಪಳ ರವರ ನೇತೃತ್ವದಲ್ಲಿ ಮೌನೇಶ್ವರ ಪಾಟೀಲ್ ಸಿಪಿಐ ಯಲಬುರ್ಗಾ ವೃತ್ತ, ಸುರೇಶ ಡಿ. ಸಿಪಿಐ ಕೊಪ್ಪಳ ಗ್ರಾಮೀಣ ವೃತ್ರ ಡಾಕೇಶ ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ ಮತ್ತು ಸಿಬ್ಬಂದಿಯವರಾದ ವೆಂಕಟೇಶ ಎಎಸ್‌ಐ, ಸಿಹೆಚ್‌ಸಿ ನಾಗರಾಜ, ಖಾಜಾಸಾಬ, ಚಂದುನಾಯಕ, ನಿಂಗಪ್ಪ ಹೆಬ್ಬಾಳ, ಮೆಹಬೂಬ, ದೇವೆಂದ್ರಪ್ಪ, ಮಹೇಶ ಸಜ್ಜನ, ಚಿರಂಜೀವಿ, ವಿಶ್ವನಾಥ, ಶಿವಕುಮಾರ ಕೊಟೇಶ, ಅಶೋಕ, ರಿಜ್ಞಾನ ಮತ್ತು ಸಿಪಿಸಿ ಹನಮಗೌಡ, ಕನಕರಾಯ, ಉಮೇಶ, ಮಹ್ಮದರಫಿ, ಪ್ರಸಾದ, ಈರೇಶ, ಚಂದ್ರಶೇಖರ, ಮಲ್ಲಪ್ಪ, ಆಶ್ರಫ್ ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.
ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಕೊಲೆ ಮಾಡಿದ ಆಪಾದಿತರ ಸುಳಿವೇ ಇಲ್ಲದ ಮತ್ತು ಅತೀ ಸೂಕ್ಷ್ಮ ಸ್ವರೂಪದ ಪ್ರಕರಣದಲ್ಲಿ ಚಾಣಾಕ್ಷತೆಯಿಂದ ಮಾಹಿತಿಯನ್ನು ಸಂಗ್ರಹಿಸಿ ಆಪಾದಿತ ಸಿದ್ದಲಿಂಗಯ್ಯ ತಂದೆ ಗುರುಸ್ವಾಮಿ ನಾಯ್ಕಲ್ 16.06.2024 ರಂದು ಬೆಳೆಗ್ಗೆ ಕಿನ್ನಾಳ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ತನಗೆ ಗುಟ್ಕಾ ತಂದು ಕೊಡಲಿಲ್ಲ ಎಂಬ ಸಿಟ್ಟಿನಿಂದ ಕೋಪಗೊಂಡು ಕೋಲಿನಿಂದ ತಲೆಗೆ ಜೋರಾಗಿ ಹೊಡೆದು ಕೊಲೆ ಮಾಡಿರುವದಾಗಿ ಆರೋಪಿ ತಪ್ರೊಪ್ಪಿಕೊಂಡಿದ್ದಾನೆ. ಅವಾದಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಕಟ್ಟಿಗೆ (ಕೋಲು), ಮುಚ್ಚಿಟ್ಟಿದ್ದ ಮೃತಳ ಚಪ್ಪಲ್ ಮತ್ತು ಮೃತದೇಹದ ಚೀಲ ಕಾಣದಂತೆ ಅಡ್ಡಲಾಗಿ ಇಟ್ಟಿದ್ದ ನೀರಿನ ಸ್ಟೀಲ್ ಟ್ಯಾಂಕ್ ವಶಪಡಿಸಿಕೊಂಡಿದ್ದು, ಆಪಾದಿತನನ್ನು ದಸ್ತಗಿರಿ ಮಾಡಲಾಗಿದೆ.
ಏಳು ವರ್ಷದ ಅಪ್ರಾಪ್ತ ಬಾಲಕಿ ಕೊಲೆಯಾಗಿ ಹೆಚ್ಚಿನ ಮಟ್ಟದಲ್ಲಿ ಸುದ್ದಿಯಾಗಿದ್ದ ಮತ್ತು ಪತ್ತೆಗೆ ಸವಾಲಾಗಿದ್ದ ಅತೀ ಸೂಕ್ಷ್ಮ ಕೊಲೆ ಪ್ರಕರಣವನ್ನು ಪತ್ತೆ ಮಾಡಿ ಆಪಾದಿತನನ್ನು ಬಂಧಿಸಿ ಕೊಲೆ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸನೆ ವ್ಯಕ್ತಪಡಿಸಿ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.
Comments are closed.