ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರ ತರಬೇತಿ ಕಾರ್ಯಗಾರ
ಕೊಪ್ಪಳ, : ಕೊಪ್ಪಳ ನಗರದ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿವಿಧ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಮಕ್ಕಳ ಕಲಿಕಾ ಕೌಶಲ್ಯ ವೃಧ್ಧಿಸುವ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರಕ್ಕೆ ಲಯನ್ಸ್ ಕ್ಲಬ್ ಹಾವೇರಿ ಮತ್ತು ಬೆಳಗಾವಿಯಿಂದ ವಿಶೇಷ ತರಬೇತುದಾರರಾದ ಲಯನ್ ಎಸ್.ಎ. ಕಬ್ಬಿನ ಕಂಠೀಮಠ ಮತ್ತು ಲಯನ್ ವೈಶಾಲಿ ನಾಯ್ಡುರವರು ಆಗಮಿಸಿ ಕಾರ್ಯಕ್ರಮವನ್ನು ನಡೆಸಿದರು. ಈ ಕಾರ್ಯಾಗಾರದಲ್ಲಿ ಮುಖ್ಯವಾಗಿ ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ವಯಕ್ತಿಕ ನಿರ್ಧಾರ, ಶಿಸ್ತು, ಕ್ರೀಯಾಶೀಲತೆ, ಸಕಾರಾತ್ಮಕ ಮನೋಭಾವನೆ ಹೇಗೆ ಬೆಳಸಬೇಕೆಂದು ಶಿಕ್ಷಕರಿಗೆ ಕಬ್ಬಿನ ಕಂಠೀಮಠರವರು ಮಾತನಾಡಿದರು.
ಹಾಗೆಯೇ, ಇನ್ನೋರ್ವ ತರಬೇತುದಾರರು ಲಯನ್ ವೈಶಾಲಿ ನಾಯ್ಡುರವರು ಪಾಲಕರ ಜೊತೆಗೂಡಿ ಮಕ್ಕಳ ಸಮಸ್ಯೆಗಳನ್ನರಿತು ತಕ್ಷಣವೇ ಪರಿಹರಿಸಬೇಕು. ಇದರಿಂದ ಮಕ್ಕಳಲ್ಲಿ ಕಲಿಕೆಯಲ್ಲಿ ಚೇತರಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ, ನಮ್ಮ ಕೊಪ್ಪಳ ನಗರದ ವಿವಿದ ಅನುದಾನರಹಿತ ಶಾಲಾ ಶಿಕ್ಷಕರು, ನಮ್ಮ ಲಯನ್ಸ್ ಕ್ಲಬ್ನ ಅಧ್ಯಕ್ಷರು ಲಯನ್ ಚಂದ್ರಕಾಂತ ತಾಲೇಡಾ, ಕಾರ್ಯದರ್ಶಿ ಲಯನ್ ಮನೋಹರ ದಾದ್ಮಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ಬಸವರಾಜ ಬಳ್ಳೋಳ್ಳಿ, ಕಾರ್ಯದರ್ಶಿಗಳಾದ ಲಯನ್ ಗವಿಸಿದ್ದಪ್ಪ ಮುದಗಲ್ ಮತ್ತು ಲಯನ್ಸ್ ಕ್ಲಬ್ನ ಎಲ್ಲ ಪದಾಧಿಕಾರಿಗಳು ಹಾಗೂ ಶಾಲಾ ಪ್ರಾಚಾರ್ಯರಾದ ಶ್ರೀ ಮತಿ ವೈ. ಪದ್ಮಜಾರೊಂದಿಗೆ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.
Comments are closed.