ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು ಮಕ್ಕಳ ಜನಿಸುವಿಕೆ ಸಾಧನೆಯಲ್ಲ: ಡಾ.ರವೀಂದ್ರನಾಥ

Get real time updates directly on you device, subscribe now.

 

ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವುದು ಕಳವಳಕಾರಿ: ಡಾ.ಮುತ್ತಾಳ

ಶಿಶು-ತಾಯಿ ಮರಣ ಪ್ರಮಾಣಕ್ಕೆ ಬಾಲ್ಯವಿವಾಹ ಕಾರಣ

ಕೊಪ್ಪಳ: ದೇಶ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದರೆ ಹೆಮ್ಮೆ. ಆದರೆ ಜನಸಂಖ್ಯೆಯಲ್ಲಿ ಮುಂದಿರುವುದು ತರುವಲ್ಲ.
ದೇಶಕ್ಕೆ ಮಗುವಿನ ಸಾಧನೆ ಮುಖ್ಯವೇ ಹೊರತು ಮಕ್ಕಳ ಜನಿಸುವಿಕೆ ಸಾಧನೆಯಲ್ಲ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಡಾ.ರವೀಂದ್ರನಾಥ ಹೇಳಿದರು.

ತಾಲೂಕಿನ ಅಳವಂಡಿಯ ಶ್ರೀ ಶಿವಮೂರ್ತಿಸ್ವಾಮಿ ಇನಾಂದಾರ ಕಟ್ಟೀಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ (ಜುಲೈ 4) ನಡೆದ ವಿಶ್ವ ಜನಸಂಖ್ಯಾ ನಿಯಂತ್ರಣ ದಿನಾಚರಣೆ ಉದ್ಘಾಟಿಸಿದ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಳದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರು ಕುಟುಂಬ ಕಲ್ಯಾಣ ಯೋಜನೆಯ ಅನುಷ್ಠಾನಕ್ಕೆ ಆದ್ಯತೆ ನೀಡಿ ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, ಬಾಲ್ಯವಿವಾಹಗಳಿಂದ ತಾಯಿ ಹಾಗೂ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ. ಸಮಾಜದಲ್ಲಿ ಇನ್ನೂ ಉಳಿದಿರುವ ಕೆಲ ಅನಿಷ್ಠ ಪದ್ದತಿಗಳಿಂದ ಜನಸಂಖ್ಯೆಯೂ ಏರುಗತಿಯಲ್ಲಿದೆ. ಇಂಥವಕ್ಕೆಲ್ಲ ಕಡಿವಾಣ ಬೀಳಬೇಕು ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಗವಿಸಿದ್ದಪ್ಪ ಮುತ್ತಾ ಮಾತನಾಡಿ, ಇಡೀ ವಿಶ್ವದಲ್ಲಿ ಜನಸಂಖ್ಯೆಗೆ ಸಂಬಂಧಿಸಿದಂತೆ ಚೀನಾ ಹಾಗೂ ಭಾರತದ ನಡುವೆ ಪೈಪೋಟಿ ನಡೆದಿದೆ. ಜನಸಂಖ್ಯೆ ಹೆಚ್ಚಳದಿಂದ ಅವಿಭಕ್ತ ಕುಟುಂಬಗಳೆಲ್ಲ ವಿಭಕ್ತ ಕುಟುಂಬಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಳವಂಡಿಯ ಆಯುಷ್ ಮೆಡಿಕಲ್ ಅಧಿಕಾರಿ ಡಾ.ಚಂದ್ರಶೇಖರ ಮೇಟಿ, ಉಪನ್ಯಾಸಕರಾದ ಪ್ರದೀಪ ಪಲ್ಲೇದ್, ಈಶಪ್ಪ ಮೇಟಿ, ಗೋಣಿಬಸಪ್ಪ.ಬಿ., ವೀರಭದ್ರಪ್ಪ ಹುಂಬಿ, ಮಹೇಶ್, ವೆಂಕಟೇಶ ಎಸ್., ಹಸೀನಾಭಾನು, ಸಿದ್ದು ಕಡ್ಲೆಕೊಪ್ಪ, ಬೋರಯ್ಯ, ಸಿದ್ದಾಚಾರಿ.ಬಿ., ಗೌತಮಿ, ಬೋಧಕೇತರ ಸಿಬ್ಬಂದಿ ವೀರಣ್ಣ ಪೂಜಾರ, ದುರ್ಗಪ್ಪ, ಹನುಮವ್ವ, ಬಸವರಾಜ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಉಪನ್ಯಾಸಕ ಬಸವರಾಜ ಕರುಗಲ್ ನಿರೂಪಿಸಿದರು.
ವಿಜಯಕುಮಾರ್ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶಿವಮ್ಮ ಪ್ರಾರ್ಥಿಸಿದರು. ಮಹೇಶ್ ಎನ್.ಎಚ್. ಸ್ವಾಗತಿಸಿದರು.
ಸಿದ್ದಾಚಾರಿ.ಬಿ. ವಂದಿಸಿದರು.

ಗಣ್ಯರಿಗೆ ಸನ್ಮಾನ:
ಸಮಾರಂಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ.ರವೀಂದ್ರನಾಥ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರನ್ನು ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಸತ್ಕರಿಸಿ ಗೌರವಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: