ಖಬರ್ ಸ್ಥಾನ ಗೋಡೆ ನಿರ್ಮಾಣಕ್ಕೆ – ಸಾಧಿಕ್ ಹುಸೇನ್ ಅತ್ತಾರ್ ಗೆ ಸನ್ಮಾನ
ಕೊಪ್ಪಳ : ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವಂತಹ ದಿಡ್ಡಿಕೇರಿ ಹಿಂದಿನ ಭಾಗದ ಬಾಚನ್ ಕಲ್ಲು ಖಬರ್ ಸ್ಥಾನಕ್ಕೆ ಆವರಣ ಗೋಡೆ ನಿರ್ಮಾಣ ಕಾಮಗಾರಿಯ ನೇತೃತ್ವ ವಹಿಸಿಕೊಂಡು ಕ್ರಿಯಾಶೀಲಗೊಂಡಿರುವ ಯುವ ಮುಖಂಡ ಸಾಧಿಕ್ ಹುಸೇನ್ ಅತ್ತಾರ್ ಅವರು ನಮ್ಮ ವಕ್ಫ್ ಆಸ್ತಿ ಸಂರಕ್ಷಣೆಗೆ ತನು ಮನ ಧನ ಸಹಾಯದೊಂದಿಗೆ ತೊಡಗಿರುವುದು ಹರ್ಷ ತಂದಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ ಹೇಳಿದರು. ವಕ್ಫ್ ಆಸ್ತಿ ಸಂರಕ್ಷಿಸಿ ಅಭಿವೃದ್ಧಿಪಡಿಸುತ್ತಿರುವ ಉದ್ಯಮಿ ಹಾಗೂ ಯುವ ಮುಖಂಡ ಸಾಧಿಕ್ ಹುಸೇನ್ ಅತ್ತಾರ್ ಅವರಿಗೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿಯವರಿಂದ ಮಂಗಳವಾರ ರಾತ್ರಿ ಸನ್ಮಾನ ಕಾರ್ಯಕ್ರಮ ಜರುಗಿತು. ಸನ್ಮಾನ ಸ್ವೀಕರಿಸಿದ ಯುವ ಮುಖಂಡ ಸಾಧಿಕ್ ಹುಸೇನ್ ಅತ್ತಾರ್ ಮಾತನಾಡಿ ಉದ್ಯಮದ ಪ್ರಾರಂಭಿಸಿದ ನಂತರ ತಾಲೂಕಿನ ಅನೇಕ ಹಳ್ಳಿಗಳ ಜಾತ್ರೆ.ದೇವಸ್ಥಾನ. ಮಸೀದಿ ಮುಂತಾದವುಗಳಿಗೆ ದೇಣಿಗೆ ಕೊಡುತ್ತ ಬಂದಿದ್ದೇನೆ. ಗ್ರಾಮೀಣ ಭಾಗದ ಎಲ್ಲಾ ಜಾತಿಗಳ ಜನರೊಂದಿಗೆ ಆತ್ಮೀಯವಾಗಿ ಸೌಹಾರ್ದದಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯ ಕಾರ್ಯಕರ್ತ ಸಿರಾಜ್ ಕೋಲ್ಕಾರ್. ಇಬ್ರಾಹಿಮ್ ಪಟೇಲ್. ಕರೀಮ್ ಗಚ್ಚಿನಮನಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಮುಖಂಡರಾದ ರಿಯಾಜ್ ಮಂಗಳಾಪೂರ. ನ್ಯಾಯವಾದಿ ಖಾಸೀಮ್ ಸಾಬ್ ಜಾಮಾಪುರ್. ರೋಶನ್ ಅಲಿ ಮಂಗಳಾಪೂರ. ಮಿರಾಜ್ ಬನ್ನಿಗೋಳ. ಶೇಖ್ ಹಿದಾಯತ್ ಉಲ್ಲಾ. ಮುರ್ತುಜಾ ಸಾಬ್ ಚುಟ್ಟದ್. ಹಸನ್ ಮಂಗಳಾಪೂರ. ಸಲೀಮ್ ಅಳವಂಡಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
Comments are closed.