ಪ್ರೊ.ಬಿ.ಕೃಷ್ಣಪ್ಪರ ಹುಟ್ಟು ಹಬ್ಬ: ಕುಷ್ಟಗಿ ದಲಿತ ಮುಖಂಡರಿಂದ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಆಚರಣೆ
ಕುಷ್ಟಗಿ.: ಕರ್ನಾಟಕ ದಲಿತ ಚಳವಳಿ ಪಿತಾಮಹ ಪ್ರೊ.ಬಿ.ಕೃಷ್ಣಪ್ಪ ಅವರ ಹುಟ್ಟು ಹಬ್ಬದ ಪ್ರಯುಕ್ತ ರವಿವಾರ ರಾತ್ರಿ ಕುಷ್ಟಗಿ ಪಟ್ಟಣದ ಗಾಂಧೀ ನಗರದ ದಲಿತ ಸಮಾಜದ ಮುಖಂಡರು ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಶುಖರಾಜ ತಾಳಕೇರಿ, ವಕೀಲರ ಸಂಘದ ಉಪಾಧ್ಯಕ್ಷ ಶಿವುಕುಮಾರ ದೊಡ್ಡಮನಿ, ಬಾಳಪ್ಪ ಬೇವಿನಕಟ್ಟಿ, ಆರೋಗ್ಯ ಇಲಾಖೆ ಸುರೇಶ ಇಂಡಿ, ಅಂಬಣ್ಣ ಕಟ್ಟಿಮನಿ, ಕಾಸೀಮಪ್ಪ ಬಿಜಕಲ್ ಹಾಗೂ ಇನ್ನಿತರೆ ದಲಿತ ಮುಖಂಡರು ಉಪಸ್ಥಿತರಿದ್ದರು.
Comments are closed.