ಸತತ 23ನೇ ಬಾರಿಗೆ ಶ್ರೀನಿವಾಸ್ ಗುಪ್ತಾರಿಗೆ ಅಂತರಾಷ್ಟ್ರೀಯ ರಫ್ತುದಾರ ಪ್ರಶಸ್ತಿ
ಕೊಪ್ಪಳ : ಭಾಗ್ಯನಗರದ ಖ್ಯಾತ ಕೂದಲ ಉದ್ಯಮಿ ಶ್ರೀನಿವಾಸ್ ಗುಪ್ತ ಇವರ ಶ್ರೀನಿವಾಸ ಹೇರ್ ಇಂಡಸ್ಟ್ರಿ ಪ್ರೈವೇಟ್ ಲೀ. ಸತತ 23ನೇ ಬಾರಿಗೆ ಎಕ್ಸ್ ಪೋರ್ಟ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಗಿದೆ.
ಇತ್ತೀಚಿಗೆ ಮುಂಬೈಯ ಗ್ರಾಂಡ್ ನೆಸ್ಕೋ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೨೧-೨೩ ನೆಯ ಸಾಲಿನ ಪ್ರಶಸ್ತಿಗಳನ್ನು ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ಲೆಕ್ಸ್ ಕೌನ್ಸಿಲ್ ಸ ಚೇರ್ಮನ್ ಹೇಮಂತ ಮಿನೋಚಾ ಸೇರಿದಂತೆ ಇತರರು ಉಪಸ್ಥತರಿದ್ದರು.
ಪ್ರತಿ ವರ್ಷ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ಲೆಕ್ಸ್ ಕೌನ್ಸಿಲ್ ಆಫ್ ಇಂಡಿಯಾ ರಫ್ತುದಾರರಿಗೆ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತೆ. ಸತತ ೨೩ ನೆಯ ಬಾರಿಗೆ ಶ್ರೀನಿವಾಸ್ ಗುಪ್ತಾ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾವಿರಾರು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ನೀಡಿರುವ ಶ್ರೀನಿವಾಸ್ ಗುಪ್ತಾ ರವರು ಈಗಾಗಲೇ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಎಕ್ಸಪೋರ್ಟ್ ಎಕ್ಸೆಲೆನ್ಸ್ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಗುಪ್ತಾ ರಿಗೇ ಭಾಗ್ಯನಗರ, ಕೊಪ್ಪಳದ ವಿವಿಧ ಗಣ್ಯರು , ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
Comments are closed.