ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ:  ಬಿಜೆಪಿ ಮುಖಂಡರು,ಕಾರ್ಯಕರ್ತರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

Get real time updates directly on you device, subscribe now.


ಕುಷ್ಟಗಿ.ಜೂ.09:  ನರೇಂದ್ರ ಮೋದಿಯವರು ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಜಯಗಳಿಸಿ ರವಿವಾರ ಸಂಜೆ ಸಂಸತ್ ಭವನದಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರಣ ಕುಷ್ಟಗಿ ಪಟ್ಟಣದ ಬಿಜೆಪಿ ಯುವ ಮೋರ್ಚಾ ಘಟಕದ ಪದಾಧಿಕಾರಿಗಳು ಹಾಗೂ ಬಿಜೆಪಿ ಪಕ್ಷದ ನಾಯಕರು ರವಿವಾರ ರಾತ್ರಿ ಪಟ್ಟಣದ ಮಾರುತಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜಿಪಿ ಹಿರಿಯ ಮುಖಂಡರಾದ ಸಿ.ಎಂ.ಹಿರೇಮಠ, ಉಮೇಶ ಯಾದವ, ಚಂದ್ರಕಾಂತ ವಡಗೇರಿ, ಬಿಜೆಪಿ ತಾಲೂಕು ಅಧ್ಯಕ್ಷ ಮಾಹಾಂತೇಶ ಬಾದಾಮಿ, ಪ್ರಭು ಶಂಕರಗೌಡ ಪಾಟೀಲ, ಅಶೋಕ ಬಳೂಟಗಿ, ಪುರಸಭೆ ಸದಸ್ಯ ಅಂಬಣ್ಣ ಭಜಂತ್ರಿ, ಈರಣ್ಣ ಸಬರದ್, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಮೀನುದ್ದೀನ್ ಮುಲ್ಲಾ, ಮರಸಣ್ಣ ತಾಳದ್, ವಕೀಲರಾದ ಯಮನೂರ ಜೆ.ಪೂಜಾರಿ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: