ಮನೆಗೊಂದು ಸಸಿ ನೆಟ್ಟರೆ ಊರಿಗೊಂದು ವನ ನಿರ್ಮಾಣವಾಗುತ್ತದೆ: ಮಂಜುಳಾ ಪಲ್ಲೇದ
ಕೊಪ್ಪಳ.ಜೂ.08: ಮನೆಗೊಂದು ಸಸಿ ನೆಟ್ಟರೆ ಊರಿಗೊಂದು ವನ ನಿರ್ಮಾಣವಾಗುತ್ತದೆ ಪ್ರತಿಯೊಬ್ಬರು ನಿಮ್ಮ ಮನೆಯ ಹತ್ತಿರ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು ಎಂದು ಸೋಮೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಪಲ್ಲೇದ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾದಿನೂರ ಹಾಗೂ ಸೋಮೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಇವರಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಮಧ್ಯಾಹ್ನ ತಾಲೂಕಿನ ಮಾದಿನೂರ ಗ್ರಾಮದ 1ನೇ ವಾರ್ಡಿನ ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಕಾಡು ಬೆಳಸಿ ನಾಡನ್ನು ಉಳಿಸುವ ಅವಶ್ಯಕತೆ ಇದೆ ಕಾಡು ಉಳಿದರೆ ಪ್ರಾಣಿಗಳ ಸಂಕುಲ ಬೆಳೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಗೀತಾ ನಂದಾಪೂರ, ಸಹಾಯಕಿ ಹಂಪಮ್ಮ ಹೊಸಮನಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕೃಷ್ಣ ಬನ್ನಿಕೊಪ್ಪ ಪೀರಾಸಾಬ ನಡುವಿನಮನಿ, ಗೋವಿಂದಪ್ಪಾ ಭೀಮಣ್ಣ, ಸೋಮೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಾದ ಪುಷ್ಪಾ ಹಿರೇಮಠ, ಗೀತಾ ಮಡ್ಡೇರ್, ಭಾರತಿ ಹಿರೇಮಠ, ಶೋಭಾ ಶೆಟ್ಟರ್, ಭಾರ್ಗವಿ ದೇಸಾಯಿ, ಕೃಷಿ ಸಖಿ ರತ್ನಾ ವಡ್ಡರ್, ಪಶುಸಖಿ ರೇಖಾ ಮುದ್ಲಾಪೂರ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.