ಹೈದ್ರಾಬಾದ್-ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು: ವಿಜಯ್ ದೊರೆರಾಜು

Get real time updates directly on you device, subscribe now.

ಗಂಗಾವತಿ: ಹೈದ್ರಾಬಾದ್-ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ ಮತದಾರರಿಗೆ ಅಭಿನಂದನೆಗಳು ಎಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿಜಯ್ ದೊರೆರಾಜುರವರು ಪ್ರಕಟಣೆಯಲ್ಲಿ ತಿಳಿಸಿದರು.
ಪ್ರಸ್ತುತ ಸಂಸದರ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ಕೊಡದಂತೆ ನಮ್ಮ ದೇಶದ ಜಾಣ ಮತದಾರರು ತೀರ್ಪನ್ನು ನೀಡಿದ್ದಾರೆ. ಇಲ್ಲದಿದ್ದರೆ ಬಿಜೆಪಿಯವರು ಈ ಬಾರಿ ೪೦೦ ಸ್ಥಾನ ಗೆದ್ದು, ಸಂವಿಧಾನವನ್ನು ಬದಲಾಯಿಸಲು ಸಂಚು ಹೂಡಿದ್ದರು. ಇದನ್ನರಿತ ಮತದಾರರು ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡದೇ ಅತಂತ್ರ ಸ್ಥಿತಿಯಲ್ಲಿ ಎಲ್ಲಾ ಪಕ್ಷಗಳನ್ನು ಇಟ್ಟಿದ್ದಾರೆ.
ಬಿಹಾರ ರಾಜ್ಯದಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಬಹಳ ವರ್ಷಗಳ ನಂತರ ಎರಡು ಸ್ಥಾನಗಳಲ್ಲಿ ಗೆದ್ದು, ಸಂಸತ್ ಪ್ರವೇಶ ಮಾಡಿದೆ. ನಮ್ಮ ಪಕ್ಷದ ಇಬ್ಬರು ಸಂಸದರು ಪಾರ್ಲಿಮೆಂಟ್‌ನಲ್ಲಿ ಎಲ್ಲಾ ಆಳುವ ಪಕ್ಷಗಳಿಗೆ ನೇರವಾಗಿ ಪ್ರಶ್ನೆ ಹಾಕಲಿದ್ದಾರೆ. ಇದು ಪ್ರಜಾಪ್ರಭುತ್ವದ ಜಯವಾಗಿದೆ.
ಹೈದ್ರಾಬಾದ್-ಕರ್ನಾಟಕದಲ್ಲಿ ಮತದಾರರು ಕೊಟ್ಟ ತೀರ್ಪಿಗೆ ಕರ್ನಾಟಕ ರಾಜ್ಯ ಸರ್ಕಾರ ಸ್ಪಂದಿಸಿ ಈ ಭಾಗವನ್ನು ಅಭಿವೃದ್ಧಿಪಡಿಸಬೇಕು. ಕರಾವಳಿ ಪ್ರದೇಶದ ಮತದಾರರು ಬಿಜೆಪಿಗೆ ಒಂದು ಶಕ್ತಿಯಾಗಿದ್ದಾರೆ. ಅದರಂತೆ ಹೈದ್ರಾಬಾದ್-ಕರ್ನಾಟಕ ಎಡಪಕ್ಷಗಳಿಗೆ ಶಕ್ತಿಯಾಗಲಿದೆ ಎಂದು ವಿಜಯ್ ದೊರೆರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಮ್ಯುನಿಸ್ಟ್ ಮುಖಂಡ ಭಾರಧ್ವಾಜ್ ಹಾಗೂ ಎ.ಐ.ಸಿ.ಸಿ.ಟಿ.ಯು ನ ಸಣ್ಣ ಹನುಮಂತಪ್ಪ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!