ಹಾಸ್ಟೆಲ್ ಗಳಲ್ಲಿ ಸುಸಜ್ಜಿತ ಸೌಲಭ್ಯಗಳ ಕಲ್ಪಿಸಿ -ಸಿಇಓ ರಾಹುಲ್ ರತ್ನಂ ಪಾಂಡೆಯ ಸೂಚನೆ

ಹಾಸ್ಟೆಲ್ ಗಳಿಗೆ ಜಿಪಂ ಸಿಇಓ ಭೇಟಿ ಸೌಲಭ್ಯಗಳ ಪರಿಶೀಲನೆ -

Get real time updates directly on you device, subscribe now.

 

ಗಂಗಾವತಿ : ನಗರದ ವಿವಿಧ ವಸತಿ ನಿಲಯಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಮಂಗಳವಾರ ಭೇಟಿ ನೀಡಿ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದರು.

ಮೊದಲು ಕಲ್ಯಾಣ ನಗರದ ಶ್ರೀ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲಿಸಿದರು. ನಿಲಯದ ಮಕ್ಕಳ ಸಂಖ್ಯೆ, ಹಾಸ್ಟೆಲ್ ಸಿಬ್ಬಂದಿಗಳ ಕಾರ್ಯವೈಖರಿ, ಹಾಸ್ಟೆಲ್ ನಿಂದ ಸಿಗುವ ಸೌಲಭ್ಯಗಳು, ಕುಡಿವ ನೀರು, ಕ್ರೀಡಾ ಸಾಮಗ್ರಿ, ಕಂಪ್ಯೂಟರ್ ಶಿಕ್ಷಣ, ಗ್ರಂಥಾಲಯ, ಊಟ- ಉಪಾಹಾರದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ದವಸ ಧಾನ್ಯಗಳ ಕುರಿತು ಜಿಪಂ ಸಿಇಓ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ರಿಜಿಸ್ಟರ್ ಗಳ ಪರಿಶೀಲಿಸಿದರು. ಹಾಸ್ಟೆಲ್ ಮಕ್ಕಳೊಂದಿಗೆ ಸಂವಾದ ನಡೆಸಿ, “ವಿದ್ಯಾರ್ಥಿಗಳು ಮೊಬೈಲು ಗೀಳು ಬೆಳೆಸಿಕೊಳ್ಳದೇ, ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು. ನಿತ್ಯ ಪತ್ರಿಕೆ, ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಓದಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಕೆಕೆಆರ್ ಡಿಬಿ ಅನುದಾನದಲ್ಲಿ ತಾಲೂಕಿನ ವಿಪ್ರ ಗ್ರಾಮ ಹಾಗೂ ಗಂಗಾವತಿಯ ನೀಲಕಂಠೇಶ್ವರ ನಗರದ ಸಕಿಪ್ರಾ ಶಾಲೆಯಲ್ಲಿ ನಿರ್ಮಾಣಗುತ್ತಿರುವ ಕೊಠಡಿಗಳ ಗುಣಮಟ್ಟ ಪರಿಶೀಲಿಸಿದರು. ಕಾಮಗಾರಿಗೆ ಬಳಸುವ ಮರಳು ಹಾಗೂ ಸೀಮೆಂಟ್ ಗುಣಮಟ್ಟ ನೋಡಿದರು. ʼಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆʼ ಜಿಪಂ ಸಿಇಓ ಸೂಚಿಸಿದರು.

ಮಕ್ಕಳಿಗೆ ಚಾಕ್ ಲೆಟ್ ಕೊಟ್ಟ ಸಿಇಓ !
ವಿಪ್ರ ಗ್ರಾಮದಲ್ಲಿ ಶಾಲೆ ಕೊಠಡಿ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾಗ ಪಕ್ಕದ ಅಂಗನವಾಡಿಗೆ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ತೆರಳಿ, ಅಂಗನವಾಡಿ ಚಿಣ್ಣರ ಕಲಿಕೆ ಪರಿಶೀಲಿಸಿ, ಮಕ್ಕಳಿಗೆ ತಮ್ಮ ಕಾರಲ್ಲಿಇದ್ದ ಚಾಕ್ ಲೆಟ್ ನೀಡಿ ಮಕ್ಕಳ ಪ್ರೀತಿಗೆ ಪಾತ್ರರಾದರು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್, ಪಿಆರ್ ಡಿ ಎಇಇ ಪಲ್ಲವಿ, ಪಿಡಬ್ಲ್ಯುಡಿ ಇಇ ಸುದೇಶ ಕುಮಾರ್, ಬಿಸಿಎಂ ತಾಲೂಕು ಅಧಿಕಾರಿಗಳಾದ ಉಷಾ ಮುಜಮದಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶರಣಪ್ಪ, ಪರಿಶಿಷ್ಟ ವರ್ಗಗಳ ಇಲಾಖೆ ತಾಲೂಕು ಅಧಿಕಾರಿಗಳಾದ ಶ್ರೀ ಗ್ಯಾನನಗೌಡ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ನಾಗೇಶ ಕುರಡಿ ಹಾಗೂ ವಿವಿಧ ಇಲಾಖೆ ಸಿಬ್ಬಂದಿಗಳು ಇದ್ದರು.

ವಸತಿ ನಿಲಯಗಳಲ್ಲಿನ ಮೂಲಸೌಲಭ್ಯಗಳನ್ನು ಪರಿಶೀಲಿಸಲು ಭೇಟಿ ನೀಡಲಾಗುತ್ತಿದೆ. ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಸೌಲಭ್ಯ ಒದಗಿಸುವುದು ಹಾಗೂ ಬೇಕಾಗುವ ಸೌಲಭ್ಯಗಳ ಪಟ್ಟಿ ಸಂಬಂಧ ಪಟ್ಟ ಇಲಾಖೆ ಅವರಿಂದ ಅಭಿವೃದ್ಧಿ ಪಡಿಸಲಾಗುವುದು.
ರಾಹುಲ್ ರತ್ನಂ ಪಾಂಡೆಯ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಒಂ ಕೊಪ್ಪಳ

Get real time updates directly on you device, subscribe now.

Comments are closed.

error: Content is protected !!
%d bloggers like this: