ಅಂಜನಾದ್ರಿ ಹುಂಡಿಯಲ್ಲಿ ರೂ. 26.5 ಲಕ್ಷ ಕಾಣಿಕೆ ಸಂಗ್ರಹ

Get real time updates directly on you device, subscribe now.


ಗಂಗಾವತಿ : ಅಂಜನಾದ್ರಿಯ ಶ್ರೀ ಆಂಜನೇಯ ದೇವಸ್ಥಾನ ಆನೆಗುಂದಿ (ಚಿಕ್ಕರಾಂಪುರ)ದ ಹುಂಡಿಯಲ್ಲಿ 40 ದಿನಗಳಲ್ಲಿ 26 ಲಕ್ಷ 57 ಸಾವಿರ ಕಾಣಿಕೆ ಸಂಗ್ರಹವಾಗಿದೆ.
ಗಂಗಾವತಿ ತಹಶೀಲ್ದಾರರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. ದಿ. 26-05-2023 ರಿಂದ 04-07-2023 ರವರೆಗೆ ಒಟ್ಟು 40 ದಿನಗಳ ಅವಧಿಯಲ್ಲಿ ಒಟ್ಟು .26,57,017 /- ರೂ ಗಳು ಸಂಗ್ರಹವಾಗಿದೆ ವಿವಿಧ ದೇಶಗಳ 3 ವಿದೇಶಿ ನಾಣ್ಯಗಳು (ದುಬೈ, ಮಲೇಷ್ಯಾ, ಅಮೆರಿಕಾ )ಸಂಗ್ರಹವಾಗಿವೆ
ಈ ಸಂದರ್ಭದಲ್ಲಿ ಶಿರಸ್ತೇದಾರಾದ ಆನಂತ ಜೋಶಿ, ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಗುರುರಾಜ, ಶ್ರೀಕಂಠ, ಇಂದಿರಾ, ಅನ್ನಪೂರ್ಣ, ಪ್ರದಸ , ಗಾಯತ್ರಿ,ಸೌಭಾಗ್ಯ,ಸುಧಾ, ಸೈಯದ್ ಮುರ್ತುಜಾ, ಶ್ರೀರಾಮ,ಕವಿತಾ ಎಸ್,ಕವಿತಾ ಮತ್ತು ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು , ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ರಾಜಶೇಖರ ಸುನಿಲ್ , ಪೋಲಿಸ್ ಸಿಬ್ಬಂದಿ ಪ್ರಕಾಶ ನಾಯಕ್ ASI , ಪ್ರವಾಸಿ ಮಿತ್ರ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು. ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು. ಕಳೆದ ಬಾರಿ ದಿ 25/05/2023 ರಂದು(50 ದಿನ ನಂತರ)ಹುಂಡಿ ತೆರೆಯಲಾಗಿತ್ತು ಆಗ ರೂ 28,79,910/- ಸಂಗ್ರಹವಾಗಿತ್ತು.

Get real time updates directly on you device, subscribe now.

Comments are closed.

error: Content is protected !!