ಏರುತ್ತಿರುವ ತಾಪಮಾನ ಕಡಿಮೆ ಮಾಡಲು ಪರಿಸರ ಸಂರಕ್ಷಣೆ ಅಗತ್ಯ: ಸಾವಿತ್ರಿ ಕಡಿ

Get real time updates directly on you device, subscribe now.


ಕೊಪ್ಪಳ ಜು. ೦೪: ಜಗತ್ತಿನ ತಾಪಮಾನ ಕಡಿಮೆ ಮಾಡಲು
ಪರಿಸರ ಸಂರಕ್ಷಣೆ ಅಗತ್ಯ. ಉದ್ಯೋಗ
ಸೃಷ್ಠಿಯಾಗಬೇಕಾದರೆ ಕೈಗಾರಿಕೆಗಳು ಬೇಕು. ಹಾಗೆಯೇ
ಕೈಗಾರಿಕೆಗಳ ಮಾಲಿನ್ಯ ನಿಯಂತ್ರಿಸಲು ಪರಿಸರ ಅಗತ್ಯವಾಗಿದೆ.
ಗಿಡಮರಗಳನ್ನು ಬೆಳೆಸುವುದರಿಂದ ನೈರ್ಮಲ್ಯ ವಾತಾವರಣ
ಸೃಷ್ಟಿಸಬಹುದು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳಾದ
ಸಾವಿತ್ರಿ ಕಡಿ ಅವರು ಹೇಳಿದರು.
ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದಲ್ಲಿ
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ,
ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ
ಮಂಡಳಿ ಕೊಪ್ಪಳ, ಜಿಲ್ಲಾ ಕಾನೂನು ಸೇವೆಗಳ ಅಪರಾಧಿಕಾರಿ
ಕೊಪ್ಪಳ ಹಾಗೂ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ
ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಹಾರ
ಬೇಕಾದರೆ ಶುದ್ಧೀಕರಿಸಬಹುದು, ಆದರೆ ಗಾಳಿಯನ್ನು
ಶುದ್ಧೀಕರಿಸಲು ಅಸಾಧ್ಯ. ಶುದ್ಧವಾದ ಗಾಳಿ ಪಡೆಯಲು ಪರಿಸರ
ಅಗತ್ಯವಾಗಿದೆ. ಪರಿಸರ ದಿನಾಚರಣೆಯು ಕೇವಲ
ಕಾರ್ಯಕ್ರಮಕ್ಕೆ ಸೀಮಿತವಾಗದೆ ಪರಿಸರವನ್ನು
ಸಂರಕ್ಷಿಸುವುದರ ಮೂಲಕ, ಗಿಡ ನೆಡುವ ಮೂಲಕ
ಆಚರಿಸಬೇಕು. ಪ್ರತಿದಿನವೂ ಪರಿಸರ ಸಂರಕ್ಷಣೆಯ
ದಿನವಾಗಬೇಕು. ವಿದ್ಯಾರ್ಥಿಗಳು ಗಿಡ ನೆಡುವ ಪಣ ಪಡಬೇಕು
ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ
ಸಿವಿಲ್ ನ್ಯಾಯಾಧೀಶರರು ದೇವೇಂದ್ರ ಪಂಡಿತ ಅವರು ಮಾತನಾಡಿ
ಮನುಷ್ಯನಿಗೆ ಪರಿಸರ ಅನಿವಾರ್ಯ, ಪರಿಸರಕ್ಕೆ ಮನುಷ್ಯ
ಅಗತ್ಯವಿಲ್ಲ, ಪರಿಸರವನ್ನು ಸಂರಕ್ಷಿಸಲು ಹಲವಾರು
ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕಾನೂನು
ಪರಿಶೀಲಿಸುವುದರೊಂದಿಗೆ ಪರಿಸರವನ್ನು ಸಂರಕ್ಷಿಸುವುದು
ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಚನ್ನಬಸವ ಮಾತನಾಡಿ,
ಪರಿಸರ ಮಾಲಿನ್ಯಕ್ಕೆ ನಮ್ಮ ದುರಾಸೆಗಳೇ ಕಾರಣ. ಪರಿಸರವನ್ನು
ನಾವು ರಕ್ಷಿಸಿದರೆ; ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದ

ನಾಶದಿಂದ ರಾಸಾಯನ ಮಿಶ್ರಿತ ಆಹಾರ ಸೇವಿಸುತ್ತಿದ್ದೇವೆ. ಪರಿಸರ
ನೈರ್ಮಲ್ಯವನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ನಂತರ ಪರಿಸರ ದಿನಾಚರಣೆಯ ನಿಮಿತ್ಯ ವಿವಿಧ
ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ
ನೀಡಲಾಯಿತು. ವಿವಿಧ ವಿದ್ಯಾರ್ಥಿಗಳು ಪರಿಸರ ವಿಷಯ ಕುರಿತು
ಮಾತನಾಡಿದರು. ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ
ಮುಖ್ಯಸ್ಥ ಡಾ. ಸುಂದರ ಮೇಟಿ ಹಸಿರೇ ಉಸಿರು ಎನ್ನುವುದರ
ಮೂಲಕ ಸ್ವಾಗತಿಸಿದರು ನಂತರ ಪರಿಸರ ಜಾಗೃತಿ ಕುರಿತು
ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಕರ್ನಾಟಕ ರಾಜ್ಯ ಮಾಲಿನ್ಯ
ನಿಯಂತ್ರಣ ಮಂಡಳಿ, ಕೊಪ್ಪಳದ ಪ್ರಾದೇಶಿಕ ಅಧಿಕಾರಿಗಳಾದ
ಎಸ್.ಸಿ. ಸುರೇಶ ವಂದಿಸಿದರು. ಕು. ವಿರೇಶ ಪ್ರಾರ್ಥಿಸಿದರು. ಡಾ.
ನಾಗರಾಜ ದಂಡೋತಿ ನಿರೂಪಿಸಿದರು. ರಾಜ್ಯ ಕಾನೂನು ಸೇವೆಗಳ
ಪ್ರಾಧಿಕಾರದ ಅಧಿಕಾರೇತರ ಸದಸ್ಯರಾದ ಡಾ. ಬಸವರಾಜ
ಪೂಜಾರ, ಡಾ. ಶಶಿಕಾಂತ ಉಮ್ಮಾಪುರೆ, ವಿನೋದ
ಮುದಿಬಸನಗೌಡರ, ಶರಣಪ್ಪ ಚೌವ್ಹಾಣ, ಮಹೇಶ ಬಿರಾದಾರ,
ಅರುಣಕುಮಾರ ಎ.ಜಿ, ಶ್ರೀದೇವಿ, ರಾಜು ಹೊಸಮನಿ ಹಾಗೂ ವಿವಿಧ
ಇಲಾಖೆಯ ಸಿಬ್ಬಂದಿ, ಮಹಾವಿದ್ಯಾಲಯದ ಸಿಬ್ಬಂದಿ ಮತ್ತು
ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: