ಸಚಿವ ನಾಗೇಂದ್ರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ : ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್

Get real time updates directly on you device, subscribe now.

ಹಗರಿಬೊಮ್ಮನಹಳ್ಳಿ :- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಭಾಗಿಯಾಗಿರುವ ಬಗ್ಗೆ ಯಾವ ದಾಖಲೆ ಮತ್ತು ಸಾಕ್ಷö್ಯವೂ ಇಲ್ಲದಿದ್ದರೂ ರಾಜ್ಯ ಬಿಜೆಪಿ ನಾಯಕರು ನೈತಿಕತೆ ಹಾಗೂ ಹೊಣೆಗಾರಿಕೆ ಮರೆತು ರಾಜೀನಾಮೆ ಕೇಳುವ ಮೂಲಕ ಸಚಿವ ನಾಗೇಂದ್ರ ವಿರುದ್ಧ ಷದ್ಯಂತ್ರ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಕಿಡಿಕಾರಿದ್ದಾರೆ.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ನಾಗೇಂದ್ರ ಪಾತ್ರ ಈ ಪ್ರಕರಣದಲ್ಲಿ ಇಲ್ಲದೇ ಇರುವುದರಿಂದ ಈಗಾಗಲೇ ಸಿಎಂ ಸಿದ್ಧರಾಮಯ್ಯನವರು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸಿಐಡಿಗೆ ವರ್ಗಾಯಿಸಿ ಭ್ರಷ್ಟರ ವಿರುದ್ಧ ಸಮರ ಸಾರಿದ್ದು ತಪ್ಪತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಪತ್ರೇಶ್ ತಿಳಿಸಿದರು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಚೆಕ್ ಮೂಲಕ ಲಂಚ, ಕೋವಿಡ್ ಖರೀದಿ ಹಗರಣ, ಗುತ್ತಿಗೆದಾರರಿಂದ ಲಂಚ ಸೇರಿ ನೂರಾರು ಹಗರಣ ನಡೆಸಿರುವ ನೈತಿಕತೆ ಇಲ್ಲದ ಬಿಜೆಪಿ ನಾಯಕರು ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಬೆಳವಣಿಗೆ ಎಂದ ಪತ್ರೇಶ್ ಬಿಜೆಪಿ ನಾಯಕರು ಇಂತಹ ಅಪಪ್ರಚಾರ ನಿಲ್ಲಿಸಬೇಕೆಂದು ತಾಕೀತು ಮಾಡಿದರು.

Get real time updates directly on you device, subscribe now.

Comments are closed.

error: Content is protected !!