ಚುನಾವಣಾ ಸಮೀಕ್ಷೆಗಳು ವೈಜ್ಞಾನಿಕವಾಗಿಲ್ಲ: ಭಾರಧ್ವಾಜ್
ಗಂಗಾವತಿ: ಲೋಕಸಭಾ ಚುನಾವಣೆ-೨೦೨೪ ರ ಚುನಾವಣಾ ಸಮೀಕ್ಷೆಗಳು ಜೂನ್-೦೧ ರಂದು ಬಿಡುಗೊಡೆಗೊಂಡಿದ್ದು, ಆದರೆ ಯಾವುದೇ ಸಮೀಕ್ಷೆಗಳು ವೈಜ್ಞಾನಿಕವಾಗಿರುವುದಿಲ್ಲ. ಬಿಜೆಪಿ ಪರವಾಗಿಯೇ ಸಮೀಕ್ಷೆಗಳು ಇದ್ದಿದ್ದು, ಇದಕ್ಕೆ ಎಡಪಂಥೀಯರು ಹಾಗೂ ಪ್ರಗತಿಪರರು ಹೆದರುವ ಪ್ರಶ್ನೆಯೇ ಇಲ್ಲ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ೨೦೨೪ ಲೋಕಸಭಾ ಚುನಾವಣೆಯಲ್ಲಿ ಪ್ರಗತಿಪರರು ಹೊರಗಡೆಯಿಂದ ಕಾಂಗ್ರೆಸ್ ಬೆಂಬಲಿಸಿರುವುದರಿಂದ ಜೂನ್-೦೪ ರಂದು ಹೊರಬೀಳುವ ಚುನಾವಣಾ ಫಲಿತಾಂಶವು ಐ.ಎನ್.ಡಿ.ಐ.ಎ ಮೈತ್ರಿಕೂಟದ ಪರವಾಗಿ ಬರಲಿದೆ.
ಇಡೀ ಭಾರತದ ಪೈಕಿ, ಬಿಹಾರದಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಅಭ್ಯರ್ಥಿಗಳು ಚುನಾವಣಾ ವೆಚ್ಚಕ್ಕಾಗಿ ಪ್ರತಿ ಮತದಾರರಿಂದ ೨೦ ರೂ. ಗಳ ದೇಣಿಗೆ ಕೇಳುವ ಮೂಲಕ ಮತದಾನ ನೀಡುವಂತೆ ವಿನಂತಿಸಿಕೊಂಡಿರುವುದು ವಿಶೇಷವಾಗಿದೆ.
ಒಂದುವೇಳೆ ಚುನಾವಣೆ ಫಲಿತಾಂಶ ಪ್ರಗತಿಪರರ ವಿರುದ್ಧ ಬಂದರೂ ನಮ್ಮಲ್ಲಿರುವ ಒಗ್ಗಟ್ಟನ್ನು ಮುಂದುವರೆಸಿ ಬಿಜೆಪಿಗೆ ತಕ್ಕಪಾಠ ಕಲಿಸಲು ಮುಂದಾಗಬೇಕೆಂದು ಕರೆನೀಡಿದರು.
Comments are closed.