ಲೋಕಸಭಾ ಚುನಾವಣೆ ಯಶಸ್ವಿ ವಿಜಯೋತ್ಸವಕ್ಕೆ ಸಿದ್ಧತೆ: ಸಿವಿಸಿ
ಸುಮಾರು 7 ಹಂತದಲ್ಲಿ 76 ದಿನಗಳ ಕಾಲ 18ನೇ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 206 ಸಾರ್ವಜನಿಕ ಸಭೆ ಹಾಗೂ 80 ಮಾಧ್ಯಮ ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ನಂತರ ಭಾರತ ಮಾತೆಯ ಚರಣದಲ್ಲಿ ಸ್ಥಾಪಿತಗೊಂಡ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ದೇಶದ ಒಳಿತಿಗಾಗಿ ಧ್ಯಾನ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮತದಾನೋತ್ತರ ಸಮೀಕ್ಷಾ ವರದಿಗಳು ಮೂರನೇ ಸಲ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಖಚಿತ ಎಂದು ಭವಿಷ್ಯ ನುಡಿದಿವೆ ಎಂದು ಜೆಡಿ(ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರು, ಕೊಪ್ಪಳ ವಿಧಾನಸಭಾ ಕ್ಷೇತ್ರ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು
ಎನ್. ಡಿ.ಎ. ಒಕ್ಕೂಟ ಈ ಸಲ 400 ರ ಅಂಕಿ ದಾಟಬೇಕೆಂಬುದು ಮೋದಿಜಿಯವರ ಆಶಯ. ಅದು ನನಸಾಗುವ ಎಲ್ಲಾ ಸಾಧ್ಯತೆಗಳು ಇವೆ. ಹಾಗೆಯೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಡಾ. ಬಸವರಾಜ್ ಕ್ಯಾವಟರ್ ಅವರು ಜೆಡಿ (ಎಸ್)- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಜೂನ್ 4ರಂದು ಎನ್. ಡಿ.ಎ.ಒಕ್ಕೂಟದ ಗೆಲುವು, ಮೂರನೇ ಸಲ ಮೋದಿಜಿಯವರ ಅಧಿಕಾರದ ಆರಂಭದ ಕ್ಷಣಗಣನೆ ಹಾಗೂ ಡಾ. ಬಸವರಾಜ್ ಕ್ಯಾವಟರ್ ಅವರ ಗೆಲುವಿನ ಸಂಭ್ರಮವನ್ನು ಒಟ್ಟಾಗಿ ಆಚರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಮುಂದಿನ ಐದು ವರ್ಷಗಳ ಕಾಲ ಕೊಪ್ಪಳ ಕ್ಷೇತ್ರ ಅಭಿವೃದ್ದಿ ಸೂಚ್ಯಂಕದಲ್ಲಿ ಮೇಲೆರಲು ಮಾಡಬೇಕಾದ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಿವಿ ಚಂದ್ರಶೇಖರ್ ಹೇಳಿದ್ದಾರೆ.
Comments are closed.