ತಾಯಿ, ಮಗು ಸಾವು : ವೈದ್ಯನ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ
ಖಾಸಗಿ ಆಸ್ಪತ್ರೆ ಯಡವಟ್ಟು ಹಾಗೂ ಬೇಜವಾಬ್ದಾರಿಯಿಂದ ಹೆರಿಗೆಗಾಗಿ ಬಂದಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ಕೊಪ್ಪಳದ ಜಿಲ್ಲಾಸ್ಪತ್ರೆ ಜರುಗಿದ್ದು, ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೃತ ಮಹಿಳಾ ಕುಟುಂಬಸ್ಥರು ಸರ್ಕಾರ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದು, ವೈದ್ಯನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೊಪ್ಪಳ ತಾಲೂಕಿನ ಬಿ. ಹೊಸಳ್ಳಿ ಗ್ರಾಮದ ಪ್ರತಿಭಾ ಗಂಡ ಮಹಾಂತೇಶ್ (24) ಎನ್ನುವವರಿಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕೊಪ್ಪಳ ನಗರದ ಖಾಸಗಿ ಗೋವನ್ ಕೋಪ್ ಹರಿಗೆ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯ ಡಾ. ಮಹೇಶ್ ನಿರ್ಲಕ್ಷ್ಯ ಹಾಗೂ ಯಡವಟ್ಟಿನಿಂದ ಪ್ರತಿಭಾ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಪ್ರತಿಭಾಳ ಚೊಚ್ಚಲ ಹೆರಿಗೆ ಇದೇ ಗೋವನ್ ಕೋಪ್ ಆಸ್ಪತ್ರೆಯಲ್ಲಿ ಆಗಿತ್ತಂತೆ. ಹಾಗಾಗಿ ಎರಡನೇ ಹರಿಗೆಗೆ ಬಂದ ಮಗಳನ್ನು ಪಾಲಕರು ಅದೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಪ್ರತಿಭಾ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥದು ಆರೋಪಿಸಿದ್ದಾರೆ. ವೈದ್ಯರ ವಿರುದ್ಧ ಆಕ್ರೋಶ ಹಿನ್ನೆಲೆ ಆಸ್ಪತ್ರೆ ಮುಂದೆ ಪೊಲೀಸರ ವಾಹನ ನಿಲುಗಡೆ ಮಾಡಲಾಗಿದೆ. ಇನ್ನು ಗೋವನ್ ಕೋಪ್ ಆಸ್ಪತ್ರೆಯಲ್ಲಿ ಹೆರಿಗಾಗಿ ಪ್ರತಿಭಾ ದಾಖಲಾಗಿಸಲಾಗಿದೆ. ಬೆಳಿಗ್ಗೆಯೆಲ್ಲ ಚನ್ನಾಗಿ ಪ್ರತಿಭಾ ಓಡಾಡಿದ್ದಾರಂತೆ, ಸಮಯ ಕಳದಂತೆ ರಾತ್ರಿ ಸರಿಸುಮಾರು ಪ್ರತಿಭಾಳಗೆ ಲೋ ಬಿಪಿ ಆಗಿ ರಕ್ತಸ್ರಾವ ಶುರುವಾಗಿದೆ. ಇದರಿಂದ ಕುಟುಂಬಸ್ಥದು ಗಾಬರಿಯಾಗಿದ್ದಾರೆ. ಆಸ್ಪತ್ರೆಯ ವೈದ್ಯ ಡಾ. ಮಹೇಶ್ ಗಡಬಿಡಿಯಿಂದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ರೆಫರ್ ಮಾಡಿ ಸರಿ ಸುಮಾರು ರಾತ್ರಿ 8 ಗಂಟೆ ಮೇಲೆ ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಪ್ರತಿಭಾ ಲೋ. ಬಿಪಿ ಹಾಗೂ ರಕ್ತಸ್ರಾಮದಿಂದ ಪ್ರಜ್ಞೆತಪ್ಪಿದ್ದು, ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿದೆ. ಸರ್ಕಾರಿ ವೈದ್ಯರು ಮಗು ಸಾವನ್ನಪ್ಪದ್ರು, ಪ್ರತಿಭಾಳನ್ನು ಉಳಿಸಲು ಪ್ರಯತ್ನಿಸಿದ್ದಾರೆ. ಅಲ್ದೆ ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರಗಡೆ ತೆಗೆದಿದ್ದಾರೆ, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಪ್ರತಿಭಾ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ರೆ, ಇತ್ತ ಖಾಸಗಿ ಗೋಪನ್ ಕೋಪ್ ಆಸ್ಪತ್ರೆಯ ವೈದ್ಯ ಡಾ. ಮಹೇಶ್ ಮಾತ್ರ ನಮ್ಮದೇನು ತಪ್ಪಿಲ್ಲ, ಲೋ ಬಿ.ಪಿ ಆಗಿತ್ತು, ರಕ್ತದ ಸಮಸ್ಯೆ ಇತ್ತು ಓ ನೆಗೆಟಿವ್ ಗ್ರೂಪ್ ಒರುವುದರಿಂದ ರಕ್ತ ಸಹ ಬೇಗ ಸಿಗಲಿಲ್ಲ ಹಾಗಾಗಿ ನಾವು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದೇನೆ, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪ್ರತಿಭಾ ಸಾವನ್ನಪ್ಪಿದ್ದಾಳೆಂದು ಡಾ. ಮಹೇಶ್ ಹೇಳುತ್ತಾರೆ. ಇನ್ನು ಸರ್ಕಾರಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ಡಾ. ನಾರಾಯಣಿ ಅವರು ಹೇಳುವಂತೆ ಅವರಿಗೆ ಲೋ ಬಿಪಿ ಆಗಿತ್ತು, ರಕ್ತಸ್ರಾವ ಸಹ ಆಗಿತ್ತು ಇದರಿಂದ ಮಗು ಸಾವನ್ನಪ್ಪಿತ್ತು, ನಾವು ತಾಯಿಯನ್ನು ಉಳಿಸಲು ಪ್ರಯತ್ನಿಪಟ್ಟಿದ್ದೇವೆ, ಲೋ ಬಿಪಿ ಹಿನ್ನೆಲೆ ಪ್ರತಿಭಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಖಾಸಗಿ ವೈದ್ಯನ ನಿರ್ಲಕ್ಷ್ಯ ಹಾಗೂ ಯಡವಟ್ಟಿನಿಂದ ತಾಯಿ-ಮಗು ಸಾವನ್ನಪ್ಪಿದ್ದು, ಕುಟುಂಬಸ್ಥರು ವೈದ್ಯನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರತಿಭಾಳ ಗಂಡ ಮಹಾಂತೇಶ್ ಗಜೇಂದ್ರಗಡದ ಸೂಡಿ ನಿವಾಸಿಯಾಗಿದ್ದು ಅವರು ಕೂಡ ಡಾ. ವಿರುದ್ಧ ಡಾ. ಮಹೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ನಗರ ಪೊಲೀಸ್ ಠಾಣೆ ಸಿಪಿಐ ಜಯಪ್ರಕಾಶ್ ಗೆ ದೂರು ನೀಡಿದ್ದಾರೆ.
Comments are closed.