ಕುಷ್ಟಗಿ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವರ್ಗವಾಗಿ ಆಗಮಿಸಿದ ನ್ಯಾಯಾಧೀಶರಿಗೆ ವಕೀಲರ ಸಂಘದಿಂದ ಗೌರವ ಸನ್ಮಾನ
ಕುಷ್ಟಗಿ.ಮೇ.28: ಪಟ್ಟಣದ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವರ್ಗವಾಗಿ ಆಗಮಿಸಿದ
ಹೆಚ್ಚುವರಿ ನ್ಯಾಯಾಧೀಶ ಮಹಾಂತೇಶ ಚೌಗಲೇ ಹಾಗೂ ಪ್ರಥಮ ದರ್ಜೆ ಹಾಗೂ ಜೆ.ಎಮ್ .ಎಫ್.ಸಿ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಂಡ ಗೌರವಾನ್ವಿತ ಮಾಯಪ್ಪ ಲಗಳೆಪ್ಪಾ ಪೂಜೇರಿಯವರಿಗೆ ವಕೀಲರ ಸಂಘದ ವತಿಯಿಂದ ಗೌರವಿಸಿ, ಸನ್ಮಾಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್ ಕುಷ್ಟಗಿ, ಉಪಾಧ್ಯಕ್ಷರು ಶಿವಕುಮಾರ ದೊಡ್ಡಮನಿ, ಕಾರ್ಯದರ್ಶಿ ಮೈನುದ್ದೀನ್, ಹಿರಿಯ ವಕೀಲರಾದ ನಾಗಪ್ಪ ಸೂಡಿ, ವೆಂಕಟೇಶ್ ಈಳಿಗೇರ, ಯಮನಪ್ಪ ಪೂಜಾರಿ, ಪರಸಪ್ಪ ಆಡಿನ, ರುದ್ರಯ್ಯ ಗುರುಮಠ ಹಾಗೂ ಸರ್ಕಾರಿ ವಕೀಲರಾದ ರಾಯನಗೌಡ ನಾಯಕ, ಇಂದಿರಾ ಸುಹಾಸಿನಿ, ಅಪರ ಸರಕಾರ ಅಭಿಯೋಜಕ ಪರಸಪ್ಪ ಗುಜಮಾಡಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪಿ.ರಮೇಶ್ ಸ್ವಾಗತಿಸಿ, ವಂದಿಸಿದರು.
Comments are closed.