ತ್ರಿವಳಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು : ಆರೋಪಿಯ ಬಂಧನ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ತಾಲೂಕಿನ ಹೊಸ ಲಿಂಗಪುರ ಗ್ರಾಮದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಬೇಧಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.  ಮೂರು ಜನರ ಸಾವು ಅನುಮಾನಾಸ್ಪದವಾದ ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತು .  ಪ್ರಕರಣದ ತನಿಕೆಗೆ ವಿಶೇಷ ತಂಡವನ್ನು  ಕೊಪ್ಪಳ ಎಸ್ಪಿ ಯಶೋದ ವಂಟಿಗೊಡಿ ರಚಿಸಿದ್ದರು. ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ   ಸುರೇಶ್ ಡಿ ಇವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಸುದ್ದಿಗೋಷ್ಢಿಯಲ್ಲಿ ಮಾಹಿತಿ ನೀಡಿದರು. ವಸಂತಾಳ ಎರಡನೇ ಗಂಡ ಆರೀಫ್ ನ ಅಣ್ಣ ಆಸೀಫ್(28) ಎನ್ನುವವನು ಕೊಲೆ ಮಾಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಅಣ್ಣ ಆಸಿಫ್ ನನ್ನು ಪ್ರೀತಿಸಿ ತಮ್ಮ ಅರಿಫ್ ನೊಂದಿಗೆ ಮದುವೆ ಮಾಡಿಕೊಂಡಿದ್ದಲು ವಸಂತಕುಮಾರಿ. ವಸಂತಾ, ಆರೀಫ್ ಹಾಗೂ ಆಸೀಫ್ ಮೂರು ಜನ ಗೊಂಬೆ ತಯಾರಕ ಘಟಕದಲ್ಲಿ ಕೆಲಸ ಮಾಡುತ್ತಿದ್ದರು

ಆರೀಫ್ ಮದುವೆ ಮುನ್ನ ಆಸೀಫ್ ನನ್ನು  ವಸಂತಾ ಪ್ರೀತಿಸುತ್ತಿದ್ದಳು ನಂತರ ಆಸೀಫ್ ನನ್ನು ಬಿಟ್ಟು ಅವನ ತಮ್ಮ ಆರೀಫ್ ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದೆ  ಕಾರನದಿಂದ ಆಗಾಗ್ಗೆ ಮನೆಗೆ ಬಂದು ವಸಂತಾಳೊಂದಿಗೆ ಗಲಾಟೆ ಮಾಡುತ್ತಿದ್ದ ಆಸೀಫ್

ವಸಂತಾಳನ್ನು ಮುಗಿಸಲು ಮೊನ್ನೆ ಮನೆಗೆ ಹೋಗಿದ್ದ ಆದ್ರೆ ಮನೆಯಲ್ಲಿ
ವಸಂತಾಳ ತಾಯಿ ರಾಜೇಶ್ವರಿ ಹಾಗೂ ವಸಂತಾಳ ಮಗ ಸಾಯಿಧರ್ಮ ತೇಜ ಇದ್ದರು. ರಾಜೇಶ್ವರಿಯೊಂದಿಗೆ ಗಲಾಟೆ ಮಾಡಿ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಅಜ್ಜಿಯನ್ನು ಬಿಡಿಸಲು ಬಂದ ಮೊಮ್ಮಗ ಸಾಯಿಧರ್ಮ ತೇಜುನ್ನು ಕೊಲೆ ಮಾಡಿ ಅಲ್ಲಿಯೇ ಕುಳಿತಿದ್ದಾನೆ. ನಂತರ ಮನೆಗೆ ಬಂದ ವಸಂತಾಳ ಜೊತೆ ಜಗಳ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು.

24 ತಾಸುಗಳಲ್ಲಿಯೇ ಕೊಲೆಗಾರನ ಬಂದಿಸಿದ್ದಾರೆ. ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಆಸೀಫ್

ಸಿಪಿಐ ಸುರೇಶ್ ಡಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತನ ಪತ್ತೆ ಮಾಡಿ, ಪ್ರಕರಣವನ್ನು ಭೇದಿಸಲು ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ,  ಹೇಮಂತ್ಕುಮಾರ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ,  ಮುತ್ತಣ ಸರವಗೋಳ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ  ಸುರೇಶ ಡಿ. ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ಸುನೀಲ್ ಹೆಚ್ ಪಿ.ಎಸ್.ಐ (ಕಾಹಿಸು) ಮುನಿರಾಬಾದ ಠಾಣೆ, ಶ್ರೀಮತಿ ಮೀನಾಕ್ಷಮ್ಮ ಪಿ.ಎಸ್.ಐ ಮುನಿರಾಬಾದ ಠಾಣೆ, ಮತ್ತು ಸಿಬ್ಬಂದಿಯವರಾದ ಕೃಷ್ಣ ಎ.ಎಸ್.ಐ, ಶಿವಕುಮಾರ ಹೆಚ್ಸಿ, ಮಹೇಶ ಸಜ್ಜನ್ ಹೆಚ್.ಸಿ, ರಂಗನಾಥ ಹೆಚ್.ಸಿ, ಶಿವಪುತ್ರಪ್ಪ ಹೆಚ್.ಸಿ, ಕೋಟೇಶ ಹೆಚ್‌ಸಿ, ನಿಂಗಪ್ಪ ಹೆಬ್ಬಾಳ ಹೆಚ್ಚಿಸಿ, ಸಿಪಿಸಿ ಚಂದಾಲಿಂಗ, ಮಹ್ಮದರಫಿ, ಈರೇಶ, ಲೋಕೇಶ, ಶರಣಪ್ಪ, ಮಂಜುನಾಥ, ಪ್ರಸಾದ್ ಮತ್ತು ಸುಕೋ, ಬೆರಳಚ್ಚು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.

ಆಪಾದಿತನಿಂದ ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.ಮೂರು ಜನರು ಕೊಲೆಯಾಗಿರುವ ಅತೀ ಸೂಕ್ಷ್ಮ ಕೊಲೆ ಪ್ರಕರಣವನ್ನು ಘಟನೆ ಜರುಗಿದ ಮಾಹಿತಿ ಬಂದು ಮತ್ತು ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಆಪಾದಿತನನ್ನು ಪತ್ತೆ ಮಾಡಿ ಕೊಲೆ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!