ಫಿನಿಕ್ಸ್ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನ
ಕೊಪ್ಪಳ ಮೇ:೨೭: ಪ್ರಶಿಕ್ಷಣಾರ್ಥಿಗಳು ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮೌಲ್ಯಯುತ ಶಿಕ್ಷಣ ನೀಡಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಕೆ.ವಿ.ಪ್ರಸಾದ ಕರೆ ನೀಡಿದರು.
ಅವರು ಕೊಪ್ಪಳದ ವಿನೂತನ ಶಿಕ್ಷಣ ಸೇವಾ ಟ್ರಸ್ಟ್‌ನ ಫಿನಿಕ್ಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಟ್ರಸ್ಟ್‌ನ ಅಧ್ಯಕ್ಷರಾದ ಸಿದ್ದಲಿಂಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪ್ರಶಿಕ್ಷಣಾರ್ಥಿಗಳು ಶಿಕ್ಷಣದ ಮೌಲ್ಯತೆಯನ್ನು ಎತ್ತಿ ಹಿಡಿಯಲು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮುಂಡರಗಿ ಕ.ರಾ ಬೆಲ್ಲದ ಮಹಾವಿದ್ಯಾಲದ ವಿಶ್ರಾಂತ ಉಪನ್ಯಾಸಕರಾದ ಪ್ರೊ. ಆರ್.ಎಲ್ ಪೋಲಿಸ್ ಪಾಟೀಲ್ ಅವರು ಮಾತನಾಡುತ್ತಾ ವಿದ್ಯಾರ್ಥಿ ಸಂಘದ ಮಹತ್ವ ಮತ್ತು ಪ್ರಶಿಕ್ಷಣಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಾ ಎಸ್ ಹಿರೇಮಠ ಅವರು ವಹಿಸಿಕೊಂಡು ಸಂಸ್ಥೆ ಬೆಳದುಬಂದ ಬಗೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟ್‌ನ ನಿರ್ದೇಶಕರಾದ ಡಾ. ಸುಹಾಸ ಹಿರೇಮಠ ಇವರು ಮಾತನಾಡಿದರು.
ಪ್ರಭಾರಿ ಪ್ರಾಚಾರ್ಯರಾದ ಆರ್.ಬಿ. ಗಾಂಜಿಯವರು ಮಹಾವಿದ್ಯಾಲಯ ಕಳೆದ ೭ ವರ್ಷಗಳಿಂದ ಸಾಧಿಸಿದ ಪ್ರಗತಿಯ ವಿವರಗಳನ್ನು ತಿಳಿಸುತ್ತಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ಕು. ಶ್ರೀದೇವಿ ಪ್ರಾರ್ಥನೆ ಮತ್ತು ಕು. ಅಮೃತ ಪಾಟೀಲ್ ಸ್ವಾಗತಗೀತೆ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ವೃತ್ತಿಗೆ ನೇಮಕವಾದ ಸುಮಾರು ೧೫ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
Comments are closed.