ಮೇ ಸಾಹಿತ್ಯ ಮೇಳ:ವಿವಿಧ ಪ್ರಶಸ್ತಿಗಳ ಪ್ರದಾನ

Get real time updates directly on you device, subscribe now.

ಕೊಪ್ಪಳ ಮೇ 26:  10 ನೇ ಮೇ ಸಾಹಿತ್ಯ ಮೇಳದ ಅಂಗವಾಗಿ ಪ್ರಕಟವಾಗಿದ್ದ ವಿವಿಧ ಪ್ರಶಸ್ತಿಗಳನ್ನು ಇಂದು ಸಂಜೆ ಪ್ರದಾನ ಮಾಡಲಾಯಿತು.

ವಿಭಾ ಸಾಹಿತ್ಯ ಪ್ರಶಸ್ತಿ- ತೀರ್ಥಹಳ್ಳಿಯ ಸವಿರಾಜ್ ಆನಂದ್ ,ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ-ಧಾರವಾಡದ ಎಸ್.ಆರ್.ಹಿರೇಮಠ,ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ- ಕೆರೆಕೋಣದ ಮಾಧವಿ ಭಂಡಾರಿ,ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ- ಬೆಳಗಾವಿಯ ಶಿವಾಜಿ ಕಾಗಣೇಕರ್, ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ-ಜನಾರ್ದನ(ಜನ್ನಿ) ಮೈಸೂರು,
ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ- ಇಂದೂಧರ ಹೊನ್ನಾಪುರ,ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ-ಕೊಪ್ಪಳದ ಹುಚ್ಚಮ್ಮ ಚೌಧರಿ ಅವರಿಗೆ ಪ್ರದಾನ ಮಾಡಲಾಯಿತು‌.

ಡಾ.ಹೆಚ್‌‌.ಎಸ್‌.ಅನುಪಮಾ ಅವರು ಪ್ರಶಸ್ತಿ ಪುರಸ್ಕೃತರ ಸಾಧನೆ ,ಹೋರಾಟಗಳನ್ನು ಪರಿಚಯಿಸಿದರು. ಪ್ರೊ.ಅಲ್ಲಮಪ್ರಭು ಬೆಟ್ಟದೂರ,ಬಸವರಾಜ ಸೂಳಿಭಾವಿ,ಮುತ್ತು ಹಾಲಕೇರಿ,ಬಿ.ಪೀರಬಾಷಾ,ಬಿ.ಶ್ರೀನಿವಾಸ,ಅನಿಲ ಹೊಸಮನಿ,ಹನುಮೇಶ ಕಲ್ಮಂಗಿ ಮತ್ತಿತರರು ವೇದಿಕೆಯಲ್ಲಿದ್ದರು‌.

Get real time updates directly on you device, subscribe now.

Comments are closed.

error: Content is protected !!