ಸವಿರಾಜ್ ಆನಂದೂರ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕಾರ

Get real time updates directly on you device, subscribe now.

ಸವಿರಾಜ್ ಆನಂದೂರು ಹುಟ್ಟಿದ್ದು 1987 ರಲ್ಲಿ, ಆಗುಂಬೆ ಸಮೀಪದ ಆನಂದೂರ ಹುಟ್ಟಿದ ಊರು. ಮೆಕ್ಯಾನಿಕಲ್
ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರ. ಹವ್ಯಾಸಿ ತಾಳಮದ್ದಲೆ ಅರ್ಥಧಾರಿ, ರಂಗಭೂಮಿ
ಕಲಾವಿದ. ಪ್ರಸ್ತುತ ಬೆಂಗಳೂರಿನ ಗೋಪಾಲನ್ ಕಾಲೇಜ್ ಆಫ್ ಇಂಜಿನಿಯರಿಂಗ್
ಮ್ಯಾನೇಜೆಂಟ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆಗಾರರಾಗಿಯೂ
ಹಲವು ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ‘ಬ್ಲೂಬುಕ್’ ಹಾಗೂ ‘ನಕ್ಷತ್ರಕಡ್ಡಿ’ ಅವರ ಈವರೆಗಿನ ಪ್ರಕಟಿತ ಕೃತಿಗಳು.

2023 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ.

ಕವಿ, ವಿಮರ್ಶಕರಾದ ಡಾ. ಸಬಿಹಾ ಭೂಮಿಗೌಡ
ಮತ್ತು ಡಾ. ಚಂದ್ರಶೇಖರ ತಾಳ್ಯ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.

‘ನಿರೂಪಣೆಯ ಹೊಸತನ, ಸೂಕ್ಷ್ಮ ವ್ಯಂಗ್ಯ, ಕಟಕಿ, ಬೆರಗುಗೊಳಿಸುವ ವಿಪರ್ಯಾಸದ ವಿನ್ಯಾಸಗಳನ್ನು
ಹೆಣೆಯುತ್ತಾ ವಿರುದ್ಧ ದಿಕ್ಕಿನಲ್ಲಿ ಸಾಗಿ ಸರಿದಾರಿಗೆ ಬಂದಂತೆ ಮಾಡುವ ಗ್ರಹಿಕೆಯ ಕ್ರಮ, ಗದ್ಯಗಂಧೀ
ಲಯದಲ್ಲೇ ಪರವಶಗೊಳಿಸುವಂತಿರುವ ಶೈಲಿ ಗಮನಸೆಳೆಯುವ ಕಾರಣಕ್ಕೆ ‘ಗಂಡಸರನ್ನು ಕೊಲ್ಲಿರಿ ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.

ಈ ಪ್ರಶಸ್ತಿಯನ್ನು ಲಡಾಯಿ ಪ್ರಕಾಶನ ಪ್ರಾಯೋಜಿಸಿದೆ

Get real time updates directly on you device, subscribe now.

Comments are closed.

error: Content is protected !!
%d bloggers like this: