ಜನಾರ್ಧನ ಜನ್ನಿ ಮೈಸೂರು ಇವರಿಗೆ ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ
ತಮ್ಮ ಕಂಚಿನ ಕಂಠದ ಕ್ರಾಂತಿಗೀತೆಗಳಿಂದ ಕರ್ನಾಟಕದ ಜನಚಳುವಳಿಗೆ ದೊಡ್ಡ ಶಕ್ತಿ ತುಂಬಿದ ಮೈಸೂರಿನ ಜನಾರ್ಧನ ಜನ್ನಿ ಸಾಹಿತ್ಯದಷ್ಟೇ ಹಾಡುಗಾರಿಕೆಗೂ ಅಷ್ಟೇ ಘನತೆಯನ್ನು ತಂದುಕೊಟ್ಟವರು.
ಹೃದಯ ತುಂಬಿ ಹಾಡುತ್ತ ರಾಜ್ಯದ ಜನಗಳಲ್ಲಿ ಅರಿವಿನ ಎಚ್ಚರ ಮೂಡಿಸಿದ ಈ ಹಾಡುಗಾರ
ಎಂಬತ್ತು ತೊಂಬತ್ತರ ದಶಕಗಳಲ್ಲಿ ಎಲ್ಲಿಯೇ ಚಳವಳಿಗಳು ನಡೆದರೂ ಅಲ್ಲಿ ಜನ್ನಿ ಇರಲೇಬೇಕು ಎಂಬಂಥ ವಾತಾವರಣ ಇತ್ತು.
ಆ ಮೂಲಕ ನೂರಾರು ಕ್ರಾಂತಿಗೀತೆಗಳ ಹಾಡುಗಾರರು ಸೃಷ್ಟಿಯಾದರು. ಚಳಿವಳಿಗಳು ಗರಿಗಟ್ಟಿದವು. ಹಲವು ಎದೆಗಳಲ್ಲಿ ಈ ಹಾಡುಗಳು ನಾನಾತರದ ಅಲೆಗಳನ್ನು ಎಬ್ಬಿಸಿದ್ದಂತೂ ನಿಜವೇ.
ಸಮುದಾಯದ ಗೌರವಾಧ್ಯಕ್ಷರಾಗಿ ಮೈಸೂರ ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಜನಾರ್ಧಾನ ಅವರಿಗೆ ಕೊಪ್ಪಳದ 10ನೇ ಮೇ ಸಾಹಿತ್ಯ ಮೇಳದಲ್ಲಿ ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ .
ಈ ಪ್ರಶಸ್ತಿಯನ್ನು ಮೇ ಸಾಹಿತ್ಯ ಮೇಳದ ಬಳಗವಾಗಿರುವ ದಾವಣಗೆರೆಯ ಉಪಪ್ರಾಚಾರ್ಯರಾದ ಕಲ್ಪಿತರಾಣಿ ಅವರು ಈ ಪ್ರಶಸ್ತಿಯನ್ನು ತಂದೆಯ ಹೆಸರಿನಲ್ಲಿ ಪ್ರಯೋಜಿಸಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿ ರಂಗಕರ್ಮಿ ಬಸವಲಿಂಗಯ್ಯ ಅವರಿಗೆ ಸಂದಾಯವಾಗಿತ್ತು
Comments are closed.