ಬರ ಪರಿಹಾರ : ರೈತರ ಮಾಹಿತಿಗಾಗಿ ತಾಲ್ಲೂಕುವಾರು ಸಹಾಯವಾಣಿ ಆರಂಭ
ಸರ್ಕಾರ 2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯ 07 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಜಿಲ್ಲೆಗೆ 92,630 ರೈತರಿಗೆ ರೂ. 82.67 ಕೋಟಿ ಬರಪರಿಹಾರವನ್ನು ನೇರವಾಗಿ ಡಿ.ಬಿ.ಟಿ ಮೂಲಕ ಜಮಾ ಮಾಡಲಾಗಿದೆ.
ಬರಪರಿಹಾರಕ್ಕೆ ಸಂಬAಧಿಸಿದAತೆ ಯಾವುದೇ ಸಂದೇಹ ಇದ್ದರೆ ರೈತರಿಗೆ ಅನುಕೂಲವಾಗುವಂತೆ ತಾಲೂಕುವಾರು ಸಹಾಯವಾಣಿಯನ್ನು ತೆರೆಯಲಾಗಿರುತ್ತದೆ. ರೈತರು ತಮ್ಮ ತಾಲೂಕಿಗೆ ಒಳಪಡುವ ತಹಶೀಲ್ದಾರ ಕಛೇರಿಯ ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ರೈತ ಸಂಪರ್ಕಗಳಿಗೆ ಭೇಟಿ ನೀಡಿ ಅಥವಾ ರೈತ ಕರೆ ಕೇಂದ್ರ ದೂರವಾಣಿ ಸಂಖ್ಯೆ-1902 ರಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಸಹಾಯವಾಣಿಯ ಸಂಖ್ಯೆಗಳು ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳ- 7676732001, ತಾಲೂಕು ಕಛೇರಿ, ಕೊಪ್ಪಳ-9380252346, ತಾಲೂಕು ಕಛೇರಿ ಯಲಬುರ್ಗಾ-9448833207, ತಾಲೂಕು ಕಛೇರಿ ಕುಷ್ಟಗಿ-08536-267031, ತಾಲೂಕು ಕಛೇರಿ ಕನಕಗಿರಿ-080-23900982, 7019926721, 7251961075, ತಾಲೂಕು ಕಛೇರಿ ಕುಕನೂರು – 8050303495, ತಾಲೂಕು ಕಛೇರಿ ಗಂಗಾವತಿ-9740793877, ತಾಲೂಕು ಕಛೇರಿ ಕಾರಟಗಿ-8277932133, 8277929650, 8792265569 ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಕೊಪ್ಪಳ -7760956433, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಯಲಬುರ್ಗಾ -8277932125, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಕುಷ್ಟಗಿ -8277932126, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಗಂಗಾವತಿ -8277932126 ಸದರಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Comments are closed.