ಗಂಗಾವತಿ ನಗರ ಪೊಲೀಸ್ ಠಾಣೆ : ವಿವಿಧ ಪ್ರಕರಣಗಳಲ್ಲಿ ಕಾಣೆಯಾದವರ ಪತ್ತೆಗೆ ಸಹಕರಿಸಲು ಮನವಿ
ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಕಾಣೆಯಾದವರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.
ಗಂಗಾವತಿಯ ಉಪ್ಪಿನಮ್ಯಾಳಿ ಕ್ಯಾಂಪ್‌ನ ನಿವಾಸಿ 70 ವರ್ಷದ ಮಲ್ಲಿಕಾರ್ಜುನ ಈರಣ್ಣ ಹೊನಗುಂದಿ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ದಿನಾಂಕ : 14-01-2022 ರ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಇವರ ಬಗ್ಗೆ ಈವರೆಗೂ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಈ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 96/2022 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಚಹರೆ :
ವ್ಯಕ್ತಿಯು 5.7 ಅಡಿ ಎತ್ತರವಿದ್ದು, ಕೆಂಪು ಮೈಬಣ್ಣ, ಉದ್ದ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ಪ್ರಕರಣ 2 :
ಗಂಗಾವತಿಯ ವಿಜಯನಗರ ಕಾಲೋನಿಯ ನಿವಾಸಿ ಸುಲೋಚನಾ ಕೆಲೋಜಿ ಎಂಬ 70 ವರ್ಷದ ಮಹಿಳೆಯು ದಿನಾಂಕ : 05-04-2022 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.71/2022 ರ ಕಲಂ ಮಹಿಳೆ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಚಹರೆ :
ಮಹಿಳೆಯು 5.3 ಅಡಿ ಎತ್ತರವಿದ್ದು, ಗೋಧಿ ಕೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಪಿಂಕ್ ಹಾಗೂ ಬಿಳಿ ಬಣ್ಣ ಮಿಶ್ರಿತ ಸೀರೆ ಧರಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ವ್ಯಕ್ತಿ ಹಾಗೂ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಎಸ್.ಪಿ. ಕೊಪ್ಪಳ ದೂ.ಸಂ : 08539-230111, ಡಿವೈಎಸ್‌ಪಿ ಗಂಗಾವತಿ :08533-230853, ಗಂಗಾವತಿ ನಗರ ಪೊಲೀಸ್ ಠಾಣೆ : 08533-230633, 230100, 9480803752 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಗಂಗಾವತಿ ನಗರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.
Comments are closed.