ನ್ಯಾಯಾಧೀಶರ ವರ್ಗಾವಣೆ ಕುಷ್ಟಗಿ ವಕೀಲರ ಸಂಘದಿಂದ ಅದ್ಧೂರಿ ಗೌರವ ಸನ್ಮಾನ ಸಮಾರಂಭ
ಕುಷ್ಟಗಿ.ಮೇ.15: ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಧೀಶೆ ಸರಸ್ವತಿದೇವಿಯವರು ಜಿಲ್ಲಾ ನ್ಯಾಯಾಧೀಶರಾಗಿ ಪದೋನ್ನತಿ (ಬಡ್ತಿ) ಹೊಂದಿ ಕೊಪ್ಪಳ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾಗಿ ವರ್ಗಾವಣೆ ಹೊಂದಿರುತ್ತಾರೆ ಹಾಗೂ ಪ್ರಥಮ ದರ್ಜೆ ನ್ಯಾಯಧೀಶರಾದ ಸತೀಶ ಬಿ ಅವರು ಕೂಡಾ ಹೊಸಕೋಟೆಗೆ ವರ್ಗಾವಣೆ ಹೊಂದಿರುವ ಕಾರಣ ಇಬ್ಬರೂ ನ್ಯಾಯಾಧೀಶರಿಗೆ
ವಕೀಲರ ಸಂಘದಿಂದ ಬೀಳ್ಕೊಟ್ಟು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧಿಶರಾದ ಮಹಾಂತೇಶ ಚೌಳಗಿ, ವಕೀಲರ ಸಂಘದ ಅಧ್ಯಕ್ಷರಾದ ಮಹಾಂತೇಶ ಕೆ ಕುಷ್ಟಗಿ, ಉಪಾಧ್ಯಕ್ಷರಾದ ಶಿವಕುಮಾರ ದೊಡ್ಡಮನಿ, ಕಾರ್ಯದರ್ಶಿ ಮೈನುದ್ದಿನ್ ಮುಲ್ಲಾ, ಹಿರಿಯ ವಕೀಲರಾದ ನಾಗಪ್ಪ ಸೂಡಿ, ವೆಂಕಟೇಶ್ ಈಳಿಗೇರ,
ಹೆಚ್.ಬಿ. ಕುರಿ, ರುದ್ರಯ್ಯ ಗುರುಮಠ, ಮಾರುತಿ ಡಿ, ಆರ್ ಕೆ ದೇಸಾಯಿ, ಅಮರೇಗೌಡ ಪಾಟೀಲ್, ರಾಜು ಪಾಟೀಲ. ಹುಲಗಪ್ಪ ಚೂರಿ, ವಿನಾಯಕ ಭೋಸಲೆ, ಸುಭದ್ರ ದೇಸಾಯಿ ಹಾಗೂ ವಕೀಲರು ಸಂಘದ ಸರಾವ ಸದಸ್ಯರು ಭಾಗವಹಿಸಿದ್ದರು.
Comments are closed.