ಗಾನ ಸಂಭ್ರಮ ಸಂಗೀತ ಕಾರ್ಯಕ್ರಮ

Get real time updates directly on you device, subscribe now.

ಭಾಗ್ಯನಗರ : ಗುರುಕುಲ ಸಂಗೀತ ಕಲಾ ಸಂಸ್ಥೆ ಭಾಗ್ಯನಗರ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಗಾನಯೋಗಿ ಗುರು ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಗಾನ ಸಂಭ್ರಮ ಎಂಬ ಕಾರ್ಯಕ್ರಮವನ್ನು ಭಾಗ್ಯನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಹಾರ್ಮೋನಿಯಂ ನುಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಡಿನ ಹಿರಿಯ ಸಂಗೀತಗಾರರಾದ ರಾಮಚಂದ್ರಪ್ಪ ಉಪ್ಪಾರವರು ಸಂಗೀತದಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಂಸ್ಥೆಗಳ ಪಾತ್ರ ಬಹುದೊಡ್ಡದಾಗಿದೆ. ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಮಾರುತಿ ದೊಡ್ಡಮನಿ ಉದಯಕುಮಾರ್ ಸಂಗನಾಳ, ಅಲ್ಲಾಭಕ್ಷಿ ವಾಲಿಕಾರ್ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾರುತಿ ದೊಡ್ಡಮನಿಯವರಿಂದ ಶಾಸ್ತ್ರೀಯ ಸಂಗೀತ, ಕೀರ್ತಿ ಮೇಟಿ, ಅವರಿಂದ ಸುಗಮ ಸಂಗೀತ, ಆರತಿ ಮೇಟಿ ಅವರಿಂದ ಜಾನಪದ ಸಂಗೀತ, ಕುಮಾರೇಶ ದೊಡ್ಡಮನಿಯವರಿಂದ ತಬಲಾ ಸೋಲೋ, ಪುಟ್ಟರಾಜ ಬಣ್ಣದರವರಿಂದ ಬಾನ್ಸುರಿ ವಾದನ, ಹಾಗೂ ವೈದೇಹಿ ವ್ಯಾಸಮುದ್ರಿ ಮತ್ತು ಸ್ನೇಹ ಮ್ಯಾಗಡೆಯವರಿಂದ ವಚನ ಸಂಗೀತ ಕಾರ್ಯಕ್ರಮಗಳು ಮೂಡಿ ಬಂದವು. ವಾದ್ಯ ವೃಂದದ ಕೀಬೋರ್ಡ್ ನಲ್ಲಿ ರಾಮಚಂದ್ರಪ್ಪ ಉಪ್ಪಾರ್ ತಬಲಾದಲ್ಲಿ ಮಾರುತಿ ದೊಡ್ಡಮನಿ ರಿದಂ ಪ್ಯಾಡ್ ನಲ್ಲಿ ಶಂಕರ ಬಸೂದೆ ತಾಳವಾದ್ಯದಲ್ಲಿ ಕೃ? ಸೊರಟೂರ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!