ಕರ್ಕಹಳ್ಳಿ ಗ್ರಾಮದ ಶ್ರೀ ಮೃತ್ಯುಂಜಯೇಶ್ವರ (ಶಿವಚಿದಂಬರ) ಮಹಾರಥೋತ್ಸವ
ಕೊಪ್ಪಳ, ೨೬- ಐತಿಹಾಸಿಕ ಹಿನ್ನೆಲೆಯಳ್ಳ ನಾಡಿನ ಪ್ರಸಿದ್ಧ ಕೊಪ್ಪಳ ತಾಲೂಕಿನ ಕರ್ಕಹಳ್ಳಿ ಗ್ರಾಮದ ಶ್ರೀ
ಮೃತ್ಯುಂಜಯೇಶ್ವರ (ಶಿವಚಿದಂಬರ) ಮಹಾರಥೋತ್ಸವ ಸೋಮವಾರ ಮದ್ಯಹ್ನ ೧ಕ್ಕೆ ಸಹಸ್ರಾರು ಭಕ್ತರ ಜಯ ಘೋಷರ
ಮಧ್ಯ ವಿಜೃಭಮಣೆಯಿಂದ ಜರುಗಿತು. ರಥೊತ್ಸವ ಅಂಗವಾಗಿ ಎಂಟು ದಿನಗಳಕಾಲ ವಿವಿಧ ದಾರ್ಮಿಕ ಕಾರ್ಯಕ್ರಮಗಳು
ನಿರಂತರವಾಗಿ ಜರುಗಿದವು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಸಂತ್ ಶ್ರೇಷ್ಠ ಸೂರೇಶ
ಪಾಟೀಲ್‌ಗುರು ಮಾಹಾರಜರು ಭಕ್ತರು ಪರಮಾತ್ಮನಲ್ಲಿ ಶರಣು ಹೋದಾಗ ನಿಮ್ಮ ಸಮ್ಯಸೆಗಳಿಗೆ ಪರಿಹಾರ ಸಾಧ್ಯ,
ಕಲಿಯುಗದಲ್ಲಿ ಚಿದಂಬರ ನಾಮ ಸ್ಮರಣೆಯಿಂದ ಸಕಲ ಪಾಪಗಳು ಪರಿಹಾರವಾಗುತ್ತವೆ. ಚಿದಂಬರ ಮಾಹಾಸ್ವಾಮಿ ಭಕ್ತರ
ಇಷ್ಟಾರ್ಥಗಳನ್ನು ಈಡೆರಿಸುವ ಕಾಮಧೇನು – ಕಲ್ಪವೃಕ್ಷ ಭಕ್ತರು ಸಂಕಷ್ಟಗಳನ್ನು ಬೇಡಿಕೊಳುವ ಮೂದಲೇ ಈಡೆರಿಸುವ ಚಿದಂಬರ ಮಹಾಸ್ವಾಮಿ ಕ್ಷೇತ್ರದಲ್ಲಿ ಇರುವ ನಾವು- ನೀವುಗಳೇ ಧನ್ಯರು ಎಂದರು. ಪ್ರತಿದಿನ ಭಕ್ತ ದೇವಸ್ಥಾನಕ್ಕೆ ಹೋಗಿ
ಭಗಂತನ ಸ್ಮೆರಣೆ ಮಾಡಿದ್ದರೆ ರಥೊತ್ಸವದಂದು ಭಗಂತನ ರಥವನ್ನು ಏರಿ ಭಕ್ತರಿಗೆ ದರ್ಶನ ನೀಡಿ ಕೃತಾರ್ಥರನ್ನಾಗಿ
ಮಾಡುತ್ತಾನೆ ಎಂದರು. ಸಾಪ್ತಾಹ : ಜಾತ್ರಾ ಮಹೋತ್ಸವದ ಅಂಗವಾಗಿ ಅಖಡ ಮೀಣಾ ಸಪ್ತಾಹ ಸೋಮವಾರ ಜೂನ್ ೨೬
ರಿಂದ ಎಂಟು ದಿನಗಳ ಕಾಲ ನಿರಂತರವಾಗಿ ಹಗಲೂ _ ರಾತ್ರಿ ಭಗವಂತನ ನಾಮಸರಣೆ ಜರುಗಿತು. ಕಳೆದ ಎಂಟು ದಿನಗಳು ಜರುಗಿದವಿವಿಧ ದಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಮಹಾರಾಷ್ಟ್ರದ ಭಕ್ತರು ಭಾಗವಹಿಸಿದ್ದರು.
Comments are closed.