ಗಡ್ಡಿ ಗ್ರಾಮ ಶಾಖಾಮಠದ ೨೮ನೇ ವರ್ಷದ ಜಾತ್ರಾ ಮಹೋತ್ಸವ ಐದು ಜೋಡಿಗಳ ಸಾಮೂಹಿಕ ವಿವಾಹ
ಗಂಗಾವತಿ: ತಾಲೂಕಿನ ಗಡ್ಡಿ-ಉಡುಮಕಲ್ ಗ್ರಾಮದ ಊಟಕನೂರು ಶ್ರೀಶ್ರೀಶ್ರೀ ಪ.ಪೂ ಪರಮ ತಪಸ್ವಿ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳವರು ಸ್ಥಾಪಿಸಿದ ಶಾಖಾಮಠದ ೨೮ನೇ ವರ್ಷದ ಜಾತ್ರಾ ಮಹೋತ್ಸವವು ಮೇ-೧೦ ಶುಕ್ರವಾರದಂದು ಅದ್ಧೂರಿಯಾಗಿ ಜರುಗಿತು.
ಜಾತ್ರ ಮಹೋತ್ಸವವು ಗಡ್ಡಿಮಠದ ಶ್ರೀ ವೇ.ಮೂ ಈಶ್ವರಯ್ಯಸ್ವಾಮಿ ಹಾಗೂ ಉಡುಮಕಲ್ ಬೃಹನ್ಮಠದ ಶ್ರೀ ವೇ.ಮೂ. ವೀರಬಸವ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯಿತು. ಅಲ್ಲದೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಊಟಕನೂರು ಶ್ರೀ ಮರಿಬಸವ ಸ್ವಾಮಿಗಳ ಪುರಾಣ ಪ್ರವಚನದ ಮಹಾಮಂಗಲ ಕಾರ್ಯಕ್ರಮವೂ ಜರುಗಿತು.
ಇದೇ ದಿನದ ಈ ಜಾತ್ರಾ ಮಹೋತ್ಸವದಲ್ಲಿ ಐದು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಾಯಂಕಾಲ ೫:೦೦ಕ್ಕೆ ತಾತನವರ ಉತ್ಸವ ಯಶಸ್ವಿಯಾಗಿ ಜರುಗಿತು.
Comments are closed.