ಬಸವ ಜಯಂತಿ ಆಚರಣೆ : ಶ್ರೀಮತಿ ಶಾಂತಾ ಬಸವರಾಜರವರ ವಿಶ್ವಗುರು ಬಸವಣ್ಣ ಗ್ರಂಥ ಲೋಕಾರ್ಪಣೆ

Get real time updates directly on you device, subscribe now.

ಗಂಗಾವತಿ: ಗಂಗಾವತಿಯ ಬಸವೇಶ್ವರ ಪುತ್ಥಳಿ ಮುಂದೆ ನಡೆದ ಬಸವ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯಲ್ಲಿ ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾ ಬಸವರಾಜ ಅವರು ರಚಿಸಿದ “ವಿಶ್ವಗುರು ಬಸವಣ್ಣ” ಗ್ರಂಥವನ್ನು ಗಂಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಜನಾರ್ದನ ರೆಡ್ಡಿ ಅವರು ಬಸವಣ್ಣ ಅವರ ತತ್ವ, ಆದರ್ಶಗಳು ಇಂದು ನಮಗೆಲ್ಲಾ ಅತೀ ಅವಶ್ಯಕವಾಗಿವೆ. ಎಲ್ಲಾ ಸಮುದಾಯಗಳು ಬಸವಣ್ಣನವರನ್ನು ಇ?ಪಡುತ್ತಾರೆ. ಹಾಗಾಗಿ ಅವರು ನಾಡಿನ ಸಾಂಸ್ಕೃತಿಕ ನಾಯಕರಾಗಿದ್ದಾರೆ, ಅವರ ಚರಿತ್ರೆಯ ಗ್ರಂಥ ಬರೆದಿದ್ದು ಪುಣ್ಯದ ಕೆಲಸ, ಅಂತಹ ಕಾರ್ಯ ಮಾಡಿದ ಶ್ರೀಮತಿ ಕೆ. ಶಾಂತಾ ಬಸವರಾಜ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮುಖಂಡರಾದ ತಿಪ್ಪೇರುದ್ರಸ್ವಾಮಿ ವಕೀಲರು, ವಿರೂಪಾಕ್ಷಪ್ಪ ಸಿಂಗನಾಳ, ಹೆಚ್.ಎಂ. ಸಿದ್ದರಾಮಸ್ವಾಮಿ, ಶರಣರಾದ ಮಹಾಲಿಂಗಪ್ಪ ಬನ್ನಿಕೊಪ್ಪ, ರಾಚಪ್ಪ ಸಿದ್ದಾಪುರ, ಡಾ|| ಶಿವಕುಮಾರ್ ಮಾಲಿಪಾಟೀಲ್, ಎ.ಕೆ. ಮಹೇಶಕುಮಾರ, ಓ.ಎಂ. ಬಳ್ಳೊಳ್ಳಿ, ಕೆ.ಬಸವರಾಜ, ದಿಲೀಪ್ ವಂದಾಲ್, ನಿಜಲಿಂಗಪ್ಪ ಮೆಣಸಗಿ ಹಾಗೂ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!