ಕೊಪ್ಪಳ ಲೋಕಸಭಾ ಚುನಾವಣೆ: ಮತ ಚಲಾಯಿಸಲು ಸೈಕಲ್ ರಿಕ್ಷಾದಲ್ಲಿ ಬಂದ ದಂಪತಿಗಳು
ಕೊಪ್ಪಳ,): ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಇಂದು (ಮೇ 07 ರಂದು) ಮತದಾನ ನಡೆಯುತ್ತಿದ್ದು, ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾವತಿ ನಗರದ ಬಾಲಕಿಯರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟಿ ಸಂಖ್ಯೆ 174 ರಲ್ಲಿ 68 ವರ್ಷದ ಸುರೇಶ್ ಹಾಗೂ ಅವರು 54 ವರ್ಷದ ಲಕ್ಷ್ಮೀದೇವಿ ಅವರು ಸಂವಿಧಾನಬದ್ಧ ಮತದಾನದ ಹಕ್ಕನ್ನು ಚಲಾಯಿಸಿದರು.
ಮತದಾನ ಮಾಡಲು ಈ ಇಬ್ಬರು ದಂಪತಿಗಳು ತಮ್ಮ ಸೈಕಲ್ ರಿಕ್ಷಾದ ಸವಾರಿ ಮೂಲಕ ಮತಗಟ್ಟಿಗೆ ಆಗಮಿಸಿದಿದ್ದು, ವಿಶೇಷವಾಗಿರುವುದರ ಜೊತೆಗೆ ಎಲ್ಲರ ಗಮನ ಸೆಳೆದರು.
Comments are closed.