ಮತದಾನಕ್ಕೂ ಸೈ, ನರೇಗಾ ಕೆಲಸಕ್ಕೂ ಸೈ ಕುಕನೂರ ತಾಲೂಕ ನರೇಗಾ ಕೂಲಿಕಾರರು

Get real time updates directly on you device, subscribe now.

ಮಹಾತ್ಮಗಾಂಧಿ ನರೇಗಾ ಕೂಲಿಕಾರರಿಂದ ಕಡ್ಡಾಯ ಮತದಾನ

ಮಹಾತ್ಮಾಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿ ಬಡ ಕೂಲಿಕಾರರಿಗೆ ಕೆಲಸದ ಬದ್ರತೆ ಒದಗಿಸಿ ಕೂಲಿ ನೀಡಿ ಬದುಕಿನ ಬಂಡಿ ಸಾಗಿಸುತ್ತಿರುವ ಮಹತ್ವಾಂಕ್ಷಿ ಯೋಜನೆಯಾಗಿದ್ದು, ಇಂಥ ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ನೂರಾರೂ ಕೂಲಿಕಾರರು ಪ್ರತಿದಿನ ಒಂದೋಂದು ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರಿಗೆಲ್ಲಾ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಹಾಕಲು ಮತದಾನದ ದಿನಾಂಕದ ಮುಂಚೆ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಕಾರ್ಯಕ್ರಮಗಳನ್ನು ಮಾಡಿ ಪ್ರತಿಜ್ಞಾ ವಿಧಿ ಭೋಧಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತು ಮತ್ತು ಪ್ರತಿ ಗ್ರಾಮ ಪಂಚಾಯತಿ ಹಂತದಲ್ಲಿ (EVM, VVPAT, BALLET PAPER) ಮತಯಂತ್ರದ ಕಾರ್ಯನಿರ್ವಹಣೆ ಪಾರದರ್ಶಕತೆ ಬಗ್ಗೆ ಅಣಕು ಮತದಾನ ಮಾಡಿಸುವ ಮೂಲಕ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು ಅದರಂತೆ ಅದರಂತೆ ಇಂದು ಕುಕನೂರ ತಾಲೂಕಿನ ಕುದರಿಮೋತಿ, ಇಟಗಿ, ಬಳಗೇರಿ, ಮಂಡಲಗೇರಿ, ಸೇರಿದಂತೆ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರು ಸ್ವಯಂ ಪ್ರೇರಿತರಾಗಿ ನರೇಗಾ ಕೆಲಸಕ್ಕೆ ಹೋಗಿ ನೇರವಾಗಿ ಮತಕೇಂದ್ರಕ್ಕೆ ಬಂದು ಮತ ಚಲಾಯಿಸಿ, ನರೇಗಾ ಕೆಲಸಕ್ಕೂ ಸೈ ನಾವು ಮತದಾನಕ್ಕೂ ಸೈ ಎಂದು ಹೇಳಿದ್ದಾರೆ.

ಮತಕೇಂದ್ರಗಳ ವಿಶೇಷತೆ: ಇಟಗಿ ಮತ್ತು ತಳಕಲ್ ಗ್ರಾಮಗಳಲ್ಲಿ ಪಿಂಕ್ ಮಾದರಿ ಮತಗಟ್ಟೆ ಮಹಿಳಾ ಸ್ನೇಹಿ ಮತದಾನದ ಅಧಿಕಾರಿಗಳು ಪಿಂಕ್, ಬಣ್ಣದಿಂದ ಅಲಂಕೃತಗೊಳಿಸಲಾಗಿದೆ , ಮಂಗಳೂರು ನಲ್ಲಿ ವಿಶೇಷ ಚೇತನ ಸ್ನೇಹಿ, ಕುಕನೂರ ಪಟ್ಟಣದಲ್ಲಿ ಯುವ ಮತಗಟ್ಟೆ ಸೇರಿ ಎಲ್ಲಾ ಮತಗಟ್ಟೆಯಲ್ಲಿ ಕುಡಿಯೋ ನೀರು, ನೆರಳು, ಪೆಂಡಾಲ್ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ಯಾಗಿ ಬೂತಗನ್ನಡಿ, ರ್ಯಾಂಪ್ ವ್ಯವಸ್ಥೆ, ಶೌಚಾಲಯ ಸೇರಿದಂತೆ ಅನೇಕ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ.
ಇದರಿಂದಾಗಿ ನರೇಗಾ ಕೂಲಿಕಾರರು ಉತ್ಸಾಹದಿಂದ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಗಿಸಿದ್ದಾರೆ.

ನಮಗೆ ಮತದಾನದ ಮಹತ್ವದ ಬಗ್ಗೆ ಕಾಮಗಾರಿ ಸ್ಥಳಕ್ಕೆ ಬಂದು ಪಿ.ಡಿ.ಓ ರವರು ಮತ್ತು ತಾಲೂಕ ಐ.ಇ.ಸಿ ಸಂಯೋಜಕರು ಹೇಳಿದ್ದರು, ನಾವೆಲ್ಲರೂ ಸೇರಿ ಇಂದು ಮಾರುತಿ ಪೂಜಾರ ಇವರ ಹೊಲದ ಹತ್ತಿರ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಿಂದ ಬಂದು ನಮ್ಮ ಮತ ನಮ್ಮ ಹಕ್ಕು ಎಂದು ಮತ ಚಲಾಯಿಸಿದ್ದೇವೆ- ಶರಣಬಸವ ಆರ್ ಚಲವಾದಿ

ನರೇಗಾ ಕೂಲಿಕಾರರಿಗೆ ತಾಲೂಕ ಐ.ಇ.ಸಿ ಸಂಯೋಜಕರು ಕಾಮಗಾರಿ ಸ್ಥಳಕ್ಕೆ ಬಂದು ಸ್ವೀಪ್ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದರು ಅದರಂತೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಂಡಲಗೇರಿ, ಚಿಕೇನಕೊಪ್ಪ, ಸೋಂಪೂರ ಗ್ರಾಮಗಳಲ್ಲಿ ಕೂಲಿಕಾರರು ಕೆಲಸದಿಂದ ಬಂದು ನೇರವಾಗಿ ಮತಹಾಕಿದ್ದಾರೆ. ಪಂ.ಅ.ಅಧಿಕಾರಿ ಸುರೇಶ್ ಕಾವಳೆ.

Get real time updates directly on you device, subscribe now.

Comments are closed.

error: Content is protected !!