ಗಂಗಾವತಿಯಲ್ಲಿ ಎ.ಐ.ಸಿ.ಸಿ.ಟಿಯು ನಿಂದ ವಿಶ್ವ ಕಾರ್ಮಿಕರ ದಿನಾಚರಣೆ
ಗಂಗಾವತಿ: ನಗರದಲ್ಲಿ ಇಂದು ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಎ.ಐ.ಸಿ.ಸಿ.ಟಿ.ಯು ಸಂಘಟನೆ ವತಿಯಿಂದ ಆಚರಿಸಲಾಯಿತು ಎಂದು ಎ.ಐ.ಸಿ.ಸಿ.ಟಿ.ಯು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸಣ್ಣ ಹನುಮಂತಪ್ಪ ಹುಲಿಹೈದರ ಪ್ರಕಟಣೆಯಲ್ಲಿ ತಿಳಿಸಿದರು.
ನಗರದ ೨೦ನೇ ವಾರ್ಡ್‌ನ ಚಲವಾದಿ ಓಣಿಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್‌ರವರ ಕಲ್ಯಾಣ ಮಂಟಪದ ಮುಂದೆ ಕೆಂಪು ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆ ಕಾರ್ಯಕ್ರಮವನ್ನು ನಮ್ಮನ್ನಗಲಿದ ನಮ್ಮ ಸಂಘಟನೆಯ ಹಿರಿಯ ಹೋರಾಟಗಾರರಾದ ಕಾಮ್ರೇಡ್ ಡಾ. ಲಕ್ಷ್ಮೀನಾರಾಯಣರವರ ಭಾವಚಿತ್ರಕ್ಕೆ ಹೂವು ಹಾಕಿ ಒಂದು ನಿಮಿ? ಮೌನಾಚರಣೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕಾರ್ಮಿಕ ದಿನಾಚರಣೆ ಕುರಿತು ಹಲವು ಕಾರ್ಮಿಕರ ಮುಖಂಡರು ಮಾತನಾಡಿದರು ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಕುರಿತು ಕಾಮ್ರೇಡ್ ಭಾರದ್ವಾಜ್ ರವರು ಮಾತನಾಡುತ್ತಾ ಕಾರ್ಮಿಕರು ಒಂದು ದಿನಕ್ಕೆ ೧೨ ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಅದನ್ನು ವಿರೋಧಿಸಿ ಹೋರಾಟ ನಡೆಸಿ ನ್ಯಾಯ ಕೊಡಿಸಿ ಹುತಾತ್ಮರಾದ ಕಾರ್ಮಿಕರನ್ನು ನಾವು ಎಂದೂ ಮರೆಯಬಾರದು. ಪ್ರತಿವ? ಈ ಕಾರ್ಯಕ್ರಮ ನಡೆಸಬೇಕು. ಈ ಕಾರ್ಮಿಕ ದಿನಾಚರಣೆಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಕಾಮ್ರೇಡ್ ಪಿ.ಆರ್.ಎಸ್ ಮಣಿ ಬೆಂಗಳೂರುರವರು ಮಾತನಾಡಿ ಅಮೇರಿಕಾದ ಚಿಕಾಗೋ ನಗರದಲ್ಲಿ ೧೮೮೬ರ ಮೇ ಒಂದರಂದು ಕಾರ್ಮಿಕರು ದಿನಕ್ಕೆ ೧೨ ಗಂಟೆ ಕೆಲಸ ಮಾಡುವುದನ್ನು ವಿರೋಧಿಸಿ ಬಿಳಿ ಧ್ವಜ ಕೈಯಲ್ಲಿಡಿದು ಹೋರಾಟ ನಡೆಸುವ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರನ್ನು ಗುಂಡಿಟ್ಟು ಕೊಲ್ಲಲಾಯಿತು. ಅವರ ರಕ್ತದಿಂದ ಬಿಳಿಯ ಧ್ವಜ ಕೆಂಪಾಗಿ ಬದಲಾಗುತ್ತದೆ. ಕಾರ್ಮಿಕರ ರಕ್ತದಿಂದ ಬಂದ ಈ ಕೆಂಪು ಧ್ವಜದ ಮಹತ್ವ ಹಾಗೂ ಮೇ ಒಂದರ ವಿಶ್ವಕಾರ್ಮಿಕ ದಿನಾಚರಣೆಯ ಮಹತ್ವ ಎಲ್ಲರೂ ಸಂಪೂರ್ಣವಾಗಿ ತಿಳಿದು ಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾ|| ವಿಜಯ ದೊರೆರಾಜು, ಕಾ|| ಪರಶುರಾಮ, ಕಾ|| ಬಾಬರ್, ಕಾ|| ರಮೇಶ.ಕೆ, ಕಾ|| ಮಾಯಮ್ಮ, ಕಾ|| ಚಾಂದ್ ಪಾ?, ಹನುಮಂತ ಚೌಡಯ್ಯ, ಅಮೀರ ಅಲಿ, ಕಾ|| ಕೇಶವ ನಾಯ್ಕ, ಪಾರ್ವತಮ್ಮ ಹಾಗೂ ಎ.ಐ.ಸಿ.ಸಿ.ಟಿ.ಯು ಅಂಗ ಸಂಘಟನೆಗಳ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Comments are closed.