ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಕ್ರಮಕ್ಕೆ ಶೈಲಜಾ ಹಿರೇಮಠ ಒತ್ತಾಯ
ಕೊಪ್ಪಳ : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ ಒತ್ತಾಯಿಸಿದ್ದಾರೆ.
ಅವರು ರವಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ನಂತರ ಭಾರತದಲ್ಲಿ ಎಂದೂ ಕಂಡರಿಯದ ಹಾಗೂ ಕೇಳರಿಯದ ಸೆಕ್ಸ್ ಸ್ಕ್ಯಾಂಡಲ್ ನಡೆದಿರುವುದು ಅತ್ಯಂತ ಆಘಾತಕಾರಿ ಹಾಗೂ ದುರಂತ, ಕರ್ನಾಟಕದ ಮಾನವನ್ನು ಮಾಜಿ ಪ್ರಧಾನಿ ದೇವೆಗೌಡರ ಮೊಮ್ಮಗ ನಿಂದ ಹರಾಜಗಿರುವುದು ಅತ್ಯಂತ ಖಂಡನೀಯ,ಒAದಲ್ಲ,ಎರಡಲ್ಲ ಮೂರು ಸಾವಿರ ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನೆಡೆದಿರುವುದು ಅಸಹ್ಯಕರ.ಈ ಘಟನೆಯಲ್ಲಿ ರಾಜಕೀಯವಾಗಿ ಹಾಗೂ ಹಣದಿಂದ ಪ್ರಭಾವಿ ಕುಟುಂಬವಾದ ಮಾಜಿ ಪ್ರಧಾನಿಗಳಾದ ದೇವೇಗೌಡರ ಮೊಮ್ಮಗ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಇರುವುದರಿಂದ, ಈ ಘಟನೆಯಲ್ಲಿ ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಸಿಗಬೇಕೆಂದರೆ, ದೇವೆಗೌಡರು ನೈತಿಕ ಹೊಣೆ ಹೊತ್ತು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಹಾಗೆಯೇ ಕುಮಾರಸ್ವಾಮಿಯವರು ಮತ್ತು ಹೆಚ್.ಡಿ ರೇವಣ್ಣನವರು ತಮ್ಮ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಹಾಗೆಯೇ, ಪ್ರಜ್ವಲ್ ರೇವಣ್ಣ ಅವರು ರಾಜೀನಾಮೆ ಕೊಟ್ಟು, ಅವರು ವಿದೇಶಕ್ಕೆ ಹೋಗದ ಹಾಗೆ ಎಸ್‌ಐಟಿ ನೋಡಿಕೊಳ್ಳಬೇಕು.
ರಾಜಕೀಯವಾಗಿ ಪ್ರಭಾವಿ ಕುಟುಂಬ ಆಗಿರುವುದರಿಂದ ಸಾಕ್ಷಿಗಳು ನಾಶವಾಗುವ ಅವಕಾಶವಿರುವುದರಿಂದ ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆಯಾಗಬೇಕು,ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಬಿಜೆಪಿ ಈ ಘಟನೆಯ ಬಗ್ಗೆ ಚಕಾರ ಎತ್ತದಿರುವುದು ಖಂಡನೀಯ. ಕೂಡಲೇ ಪ್ರಜ್ವಲ್ ರೇವಣ್ಣನವರನ್ನು ಬಂಧಿಸಿ ಸಂತ್ರಸ್ತರಿಗೆ ಜೀವರಕ್ಷಣೆ ನೀಡಬೇಕು,.ರಾಷ್ಟ್ರೀಯ ಮಹಿಳಾ ಆಯೋಗ ತಮ್ಮ ಕರ್ತವ್ಯ ತಾರತಮ್ಯವಿಲ್ಲದೇ ನಿರ್ವಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಜ್ಯೋತಿಎಂ. ಗೊಂಡಬಾಳ, ನಾಗರತ್ನ ಪೂಜಾರ ಉಪಸ್ಥಿತರಿದ್ದರು.
Comments are closed.