ಗ್ಯಾರಂಟಿ ಯೋಜನೆಗಳೇ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ: ರಡ್ಡಿ ಶ್ರೀನಿವಾಸ
ಕೊಪ್ಪಳ : ಈ ಬಾರಿ ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳೇ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ರಡ್ಡಿ ಶ್ರೀನಿವಾಸ ಹೇಳಿದರು.
ಅವರು ರವಿವಾರ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಯೋಜನೆಗಳನ್ನು ಬಡವರಿಗೆ ತಲುಪಿಸಿದ್ದಾರೆ,
ಕೊಪ್ಪಳ ಜಿಲ್ಲೆಯಲ್ಲಿ ಗೃಹಜ್ಯೋತಿ 280294 ವಿದ್ಯುತ್ ಗೃಹ ಬಳಕೆದಾರರು ಅದರಲ್ಲಿ 259840 ಕುಟುಂಬಗಳು ಬಲಕೆದಾರರು ಈ ಯೋಜನೆಯ ಶೇ.96.35%, ಶಕ್ತಿ ಯೋಜನೆ 5,07,55032 ಅದರಲ್ಲಿ 2,83,56422 ಮಹಿಳೆಯರು ಇದರಿಂದ 91,35,40309 ರೂ. ಆದಾಯ ಬಂದಿರುತ್ತದೆ ಹಾಗೂ ಅನ್ನಭಾಗ್ಯ 210286 ಅರ್ಹ ಪಡಿತರ ಚೀಟಿಗಳ ಸಂಖ್ಯೆ 114,75,55 590 ರೂ ಗಳನ್ನು ನೀಡಲಾಗಿದೆ, ಗೃಹಲಕ್ಷ್ಮಿ ಯೋಜನೆಯ ಜಿಲ್ಲೆಯ ಜನೇವರಿ 2024 ರ ಅಂತ್ಯಕ್ಕೆ ನೋಂದಣಿಯಾದ 2,98,936 ಪ್ರತಿ ತಿಂಗಳು 59,78,72,000 ಅನುದಾನ ಒಟ್ಟು 05 ತಿಂಗಳಲ್ಲಿ 295166 ಫಲಾನುಭವಿಗಳಿಗೆ 285,29,64,000 ರೂ ಪಾವತಿಸಿದೆ, ಯುವನಿಧಿ ಯೋಜನೆಯ ಜಿಲ್ಲೆಯ 730 ಫಲಾನುಭವಿಗಳಿಗೆ ಅನುದಾನ ನೀಡಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಈ ಬಾರಿ ಮಹಾ ಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ 1 ಲಕ್ಷ ರೂ., ಯುವಬೆಳಕು ಯೋಜನೆಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವತಿಯರಿಗೆ-ಯುವಕರಿಗೆ ಪ್ರತಿವರ್ಷ 1 ಲಕ್ಷ ರೂ. ಕೃಷಿ ಸಾಲ ಮನ್ನಾಕ್ಕೆ ಶಾಶ್ವತ ಆಯೋಗ ರಚನೆ, ಎಂಜಿ ನರೇಗ ಸೇರಿದಂತೆ ರಾಷ್ಟ್ರೀಯ ಕನಿಷ್ಠ ವೇತನ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಜಾತಿಗಣತಿಯ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡುಗಳನ್ನು ಶೇ.65% ಪ್ರತಿ ಮನೆಮನೆಗೆ ವಿತರಿಸಲಾಗಿದೆ ಇನ್ನು 35% ಗ್ಯಾರಂಟಿ ಕಾರ್ಡ್ ಗಳನ್ನು ವಿತರಣೆಯಾಗಬೇಕಾಗಿದೆ ಎಂದರು.
ಲೋಕಸಭಾ ಚುನಾವಣೆಯ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಪರ ಏ.28 ರಿಂದ ಏ.30ರ ವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಂಧನೂರು, ಕುಷ್ಟಗಿ, ಗಂಗಾವತಿಯಲ್ಲಿ ಪ್ರಚಾರ ಕೈಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಕುಷ್ಟಗಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಫಾರೂಕ್ ದಲಾಯತ್, ಕೊಪ್ಪಳ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಬಾಲಚಂದ್ರ ಮುನಿರಾಬಾದ್, ಗ್ಯಾರಂಟಿ ಯೋಜನೆಗಳ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ, ನಾಗರತ್ನ ಪೂಜಾರ ಉಪಸ್ಥಿತರಿದ್ದರು.
Comments are closed.