ಸಂವಿಧಾನ ವಿರೋಧಿ ಸರ್ಕಾರ ಕೊನೆಗೊಳಿಸಿ – ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.


– ಕಾಂಗ್ರೆಸ್ ಸರ್ಕಾರ ಇರೋತನಕ ಗ್ಯಾರಂಟಿ ಮುಂದುವರಿಕೆ
– ನಗರದ ವಿವಿಧ ವಾರ್ಡಿನಲ್ಲಿ ಭರ್ಜರಿ ಪ್ರಚಾರ

ಕೊಪ್ಪಳ:
ಸಂವಿಧಾನ ವಿರೋಧಿ ಕೇಂದ್ರ ಬಿಜೆಪಿ ಸರ್ಕಾರವನ್ನು ಕೊನೆಗೊಳಿಸಿ, ಸಂವಿಧಾನ ರಕ್ಷಣೆಗೆ ನಮ್ಮೊಂದಿಗೆ ಕೈಜೋಡಿಸಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ತ ನಗರದ ಹಮಾಲರ ಕಾಲೋನಿಯಲ್ಲಿ ಬುಧವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮತಯಾಚಿಸಿ, ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಆದರೆ ಬಿಜೆಪಿಯವರು ಟೀಕೆ ಮಾಡಿದರು. ಆದರೆ ಅವರ ಟೀಕೆಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳಲಿಲ್ಲ. ಗ್ಯಾರಂಟಿ ಬಗ್ಗೆ ಎಲ್ಲಾ ರೀತಿಯ ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಜಾರಿಯಾಗಲ್ಲ ಎಂದು ಅಪ್ಪಟ ಸುಳ್ಳು ಹೇಳಿ ಜನರ ದಾರಿತಪ್ಪಿಸುವ ಕೆಲಸ ಮಾಡಿದ್ದರು. ಆದರೆ, ರಾಜ್ಯದ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ. ನಾವು ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಸಂಕಷ್ಟವನ್ನು ದೂರ ಮಾಡಿದ್ದೇವೆ ಎಂದು ಹೇಳಿದರು.
ನಮ್ಮ ಗ್ಯಾರಂಟಿಗಳು ಬಿಜೆಪಿಯವರ ಮನೆ ಬಾಗಿಲಿಗೂ ಮುಟ್ಟಿದೆ. ಬಿಜೆಪಿ ಮತದಾರರೂ ಕಾಂಗ್ರೆಸ್ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದರೂ ನಾವು ಯಾರನ್ನು ಅವಮಾನಿಸಿಲ್ಲ. ನಮ್ಮ ಗ್ಯಾರಂಟಿಗಳು ನಾಡಿನ ಎಲ್ಲ ಜನರ ಹಕ್ಕಾಗಿದೆ. ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ನೀಡಿ ರಾಜ್ಯವನ್ನು ಸಮೃದ್ಧ ನಾಡನ್ನಾಗಿ ಕಟ್ಟಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳರನ್ನು ಹೆಚ್ಚಿನ ಮತಗಳ ಅಂತರದಿAದ ಗೆಲ್ಲಿಸಿ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಿಜೆಪಿ ಸರ್ಕಾರ ಇದ್ದಾಗ ಸಿ.ಟಿ. ರವಿ ಎಷ್ಟು ಕೋಟಿ ಲೂಟಿ ಮಾಡಿದ್ದಾರೆ ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ. ಸಿ.ಟಿ. ರವಿ ಲೂಟಿ ರವಿಯಾಗಿ, ಅವಕಾಶವಾದಿ ರಾಜಕಾರಣಿಯಾಗಿದ್ದಕ್ಕೆ ಆ ಕ್ಷೇತ್ರದ ಜನ ಸಿ.ಟಿ.ರವಿಯನ್ನು ಸೋಲಿಸಿ ಮನೆಗೆ ಕಳುಹಿಸುವ ಕೆಲಸ ಮಾಡಿದರು. ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಕರಡಿ ಕುಟುಂಬವನ್ನು ವಿಲನ್ ಮಾಡಿದವರಲ್ಲಿ ಲೂಟಿ ರವಿ ಕೂಡ ಒಬ್ಬರು. ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ತಾಕತ್ತಿದ್ದರೇ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಯಲಬುರ್ಗಾ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತನಾಡಿ, ಅಕ್ರಮವಾಗಿ ಹಣ ಗಳಿಸಿ ತಿಂದ ದೊಡ್ಡ ದೊಡ್ಡ ತಿಮಿಂಗಿಲಗಳು ಬಿಜೆಪಿಯಲ್ಲಿವೇ. ಕಾರ್ಪೋರೆಟ್ ಸಂಸ್ಥೆಗಳ ಮಾಲೀಕರ ಕಪಿಮುಷ್ಠಿಯಲ್ಲಿ ಮೋದಿ ಆಡಳಿತ ನಡೆಸುತ್ತಿದ್ದಾರೆ. ಬಡಜನರ ಹಿತಕ್ಕಿಂತ ಕಾರ್ಪೋರೆಟ್ ಕಂಪನಿಗಳ ಹಿತಕ್ಕೆ ಅಂಟಿಗೊAಡಿರುವ ಭ್ರಷ್ಟರಕೂಟ ಸರ್ಕಾರವನ್ನು ಸೋಲಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿ ಎಂದರು.

ಅಭಿಮಾನಿಯಿAದ ದೀರ್ಘದಂಡ ನಮಸ್ಕಾರ:-
ಲೋಕಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಜಯಶಾಲಿಯಾಗಲೆಂದು ನಗರದ ೩೦ನೇ ವಾರ್ಡಿನ ನಿವಾಸಿ ಬಸಪ್ಪ ಇಂದ್ರಮ್ಮನ್ನವರ್ ತಮ್ಮ ಮನೆಯಿಂದ ಅದೇ ವಾರ್ಡಿನಲ್ಲಿರುವ ಆಂಜನೇಯ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕಿ ಅಭಿಮಾನ ಮೆರೆದರು. ಈ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಇದ್ದರು.

ಬಿಜೆಪಿ ತೊರೆದು ಕೈ ಸೇರ್ಪಡೆ:
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಪಂ ಸದಸ್ಯ ವಿರುಪಾಕ್ಷಗೌಡ ಮಾಲಿಪಾಟೀಲ್, ಮಹಾಂತೇಶ ಅಂಗಡಿ, ಯಂಕಪ್ಪ ಕೊರಗಲ್, ಬಸವರಾಜ ಅಂಗಡಿ, ಶಿವಣ್ಣ ಉಳ್ಳಾಗಡ್ಡಿ, ಷರೀಪ್ ಸಾಬ್ ಇಟಗಿ, ಗಾಳೇಶ ದೇವರಮನಿ, ಯಮನೂರಪ್ಪ, ಬೇಳೂರಿನ ರಾಮಣ್ಣ ಚೆಲ್ಲಾ, ಸಣ್ಣ ಮಲ್ಲಪ್ಪ, ಬೀರಪ್ಪ ಗುಡ್ಲಾನೂರು ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್, ಕಾಂಗ್ರೆಸ್ ಮುಖಂಡ ಅಮರೇಶ ಕರಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಅರುಣ್ ಅಪ್ಪುಶೆಟ್ಟಿ, ಗುರುರಾಜ್ ಹಲಗೇರಿ, ಮುಖಂಡರಾದ ರಾಜಶೇಖರ್ ಆಡೂರು, ಮೆಹೆಬೂಬ ಅರಗಂಜಿ, ಬಸಯ್ಯ ಹಿರೇಮಠ, ವೈಜನಾಥ ದಿವಟರ್, ಶಿವಕುಮಾರ್ ಶೆಟ್ಟರ್, ಅಜೀಮ್ ಅತ್ತಾರ, ಪ್ರಸನ್ನ ಗಡಾದ, ರೇಣುಕಾ ಕಲ್ಲಾಕ್ಷಪ್ಪ, ಮಂಜುನಾಥ ಗಾಳಿ, ವಿರುಪಾಕ್ಷಯ್ಯ ಗದುಗಿನಮಠ, ಈರಣ್ಣ ಗಾಣಿಗೇರ, ಮಂಜುನಾಥ ಹಂದ್ರಾಳ, ಜ್ಯೋತಿ ಗೊಂಡಬಾಳ ಸೇರಿದಂತೆ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: