ಸಾಮರಸ್ಯದಿಂದ ಬದುಕುವುದೇ ನಿಜವಾದ ಧರ್ಮ- ಗವಿಸಿದ್ದೇಶ್ವರ ಸ್ವಾಮಿಜಿ
ಕೊಪ್ಪಳ : ನಿಜವಾದ ಧರ್ಮ ಎಂದರೆ ಸಾಮರಸ್ಯ. ಸಾಮಾನ್ಯ ಮನುಷ್ಯನೂ ಸಹ ಧಾರ್ಮಿಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸಬಹುದು. ಮಸೀದಿ, ಮಂದಿರ, ಚರ್ಚ್ ಗಳಿಗೆ ಹೋಗುವವರಷ್ಟೇ ಧಾರ್ಮಿಕ ವ್ಯಕ್ತಿಗಳಲ್ಲ ಇತರರನ್ನು ನೋಯಿಸದೆ ಮತ್ತು ವಂಚನೆ ಮಾಡದೆ ಬದುಕುವುದೇ ನಿಜವಾದ ಧರ್ಮ. ಸಾಮರಸ್ಯದಿಂದ ಬದುಕುವುದೇ ನಿಜವಾದ ಧರ್ಮ,’’ ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಭಾನಾಪುರ ಗ್ರಾಮದಲ್ಲಿ ಮಸೀದಿ ಉದ್ಘಾಟಿಸಿ ಮಾತನಾಡಿದ ಅವರು ಈ ಪುಟ್ಟ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಐದು ಮನೆಗಳಿದ್ದರೂ, ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ, ಇದು ನಿಜವಾದ ಧರ್ಮದ ಸಂಕೇತವಾಗಿದೆ ಎಂದು ಹೇಳಿದರು.
Comments are closed.