Sign in
Sign in
Recover your password.
A password will be e-mailed to you.
ಕೊಪ್ಪಳ: ಭಾರತ ದೇಶದ ಗರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಒಯ್ಯಲು ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಹೇಳಿದರು.
ವಿಧಾನಸಭಾ ಕ್ಷೇತ್ರದ ಮಾದಿನೂರು ಮಹಾಶಕ್ತಿ ಕೇಂದ್ರದಲ್ಲಿ ಲೋಕಸಭಾ ಚುನಾವಣೆ ನಿಮಿತ್ಯ ಆಯೋಜನೆಗೊಂಡ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಭಾರತಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ ಜಿ20 ಅಧ್ಯಕ್ಷೀಯ ನಾಯಕತ್ವ ವಹಿಸಿ ಭಾರತೀಯ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಪರಿಚಯಿಸುವ ಮೂಲಕ ಶ್ಲಾಘನೀಯ ಕಾರ್ಯ ನಿರ್ವಹಿತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಚಾಲಕ ಪ್ರದೀಪ್ ಹಿಟ್ನಾಳ್, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ಧನ್ ರೆಡ್ಡಿ, ಜೆಡಿಎಸ್ ಕಾರ್ಯಕಾರಣಿ ಸದಸ್ಯ ಸಿ. ವಿ.ಚಂದ್ರಶೇಖರ್, ಪ್ರಮುಖರಾದ ಕೆ.ಕರಿಯಪ್ಪ, ವಿರೂಪಾಕ್ಷಪ್ಪ, ಕೆ.ಜಿ.ಕುಲಕರ್ಣಿ, ಚಂದ್ರಶೇಖರ ಕವಲೂರು, ಕರಿಯಪ್ಪ ಮೇಟಿ, ಬಸವರಾಜ ಸಂಕನಗೌಡ್ರ, ಯಮನೂರು ಚೌಡ್ಕಿ ಸೇರಿದಂತೆ ಉಭಯ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Get real time updates directly on you device, subscribe now.
Comments are closed.