ಸಚಿವ ಸಂತೋಷ್ ಲಾಡ್ ಬಗ್ಗೆ ಏಕವಚನ ಬಳಕೆ : ವಿಜಯೇಂದ್ರ ಕ್ಷಮೆ ಯಾಚಿಸಲು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹ
ಹಗರಿಬೊಮ್ಮನಹಳ್ಳಿ :- ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಗ್ಗೆ ಏಕವಚನ ಪದಬಳಕೆ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಕ್ಷಣವೇ ಕ್ಷಮೆ ಯಾಚಿಸಬೇಕೆಂದು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ಮೋದಿಗೆ ಗೌರವದಿಂದ ಮಾತನಾಡಿ ಎನ್ನುವ ಶಾಸಕ ವಿಜಯೇಂದ್ರ ಮಾಜಿ ಸಿಎಂ ಯಡಿಯೂರಪ್ಪನಂತಹವರ ಸಜ್ಜನ ರಾಜಕಾರಣಿಯ ಪುತ್ರನಾಗಿ ಸಚಿವ ಲಾಡ್ ಬಗ್ಗೆ ಏಕವಚನ ಪದ ಬಳಕೆ ಮಾಡಿರುವುದು ಅವರ ಹುದ್ದೆ ಮತ್ತು ಘನತೆಗೆ ತಕ್ಕುದಲ್ಲ ಎಂದ ಪತ್ರೇಶ್ ಕಿಡಿಕಾರಿದರು
ತಂದೆಯ ಹೆಸರಲ್ಲಿ ಅಧಿಕಾರ ರುಚಿ ನೋಡದೇ, ಭ್ರಷ್ಟಾಚಾರ ಮಾಡದೇ, ಸ್ವಸಾಮರ್ಥ್ಯದಿಂದ ಬೆಳೆದ ಕಳಂಕರಹಿತ ವ್ಯಕ್ತಿತ್ವದ ಸಚಿವ ಲಾಡ್ ದಲಿತರ ಶೋಷಿತರ ನಿರ್ಗತಿಕರ ಪರ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ದುಡಿಯುವ ವ್ಯಕ್ತಿಯಾಗಿದ್ದು ಲಾಡ್ ಬಗ್ಗೆ ಮಾತನಾಡುವ ಮುನ್ನ ಎಚ್ಚರ ವಹಿಸಬೇಕೆಂದು ಕಿವಿಮಾತು ಹೇಳಿದ ಪತ್ರೇಶ್ ಕೂಡಲೇ ಕ್ಷಮೆ ಯಾಚಿಸಲು ಒತ್ತಾಯಿಸಿದರು
Comments are closed.