ಕಾಂಗ್ರೆಸ್ ಪಕ್ಷಕ್ಕೆ ಕೃಷಿ ಕೂಲಿಕಾರರ ಬೆಂಬಲ: ಚಂದ್ರಪ್ಪ ಹೊಸಕೇರಿ
ಗಂಗಾವತಿ: ದೇಶದಾದ್ಯಂತ ಬೆಲೆ ಏರಿಕೆ, ಬಡವರ ಆಶೋತ್ತರಗಳಿಗೆ ಸ್ಪಂದಿಸದ ಎನ್‌ಡಿಎಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೃಷಿ ಕೂಲಿಕಾರರು ಬೆಂಬಲ ನೀqಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಧ್ಯಕ್ಷ ಚಂದ್ರಪ್ಪ ಹೊಸಕೇರಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಕೃಷಿ ಕೂಲಕಾರರ ಭದ್ರತೆಗಾಗಿ ಬಿಜೆಪಿ ಹಾಗು ಜೆಡಿಎಸ್ ತಿರಸ್ಕರಿಸಿ ಇಂಡಿಯಾ ಅಭ್ಯರ್ಥಿಗಳಿಗೆ ಮತ ನೀಡಿ, ದಿನಸಿಗಳ ಬೆಲೆ ಗಗನಕ್ಕೇರಿದೆ, ಆದರೆ ಬಿಜೆಪಿ ಹತ್ತು ವರ್ಷದ ಆಡಳಿತಾವಧಿಯಲ್ಲಿ ಬಡವರ ಆದಾಯ ಹೆಚ್ಚಿಸುವ ಯಾವ ಕೆಲಸ ಮಾಡಲಿಲ್ಲ ಕೇವಲ ಬಂಡವಾಳ ಶಾಹಿಗಳ ಪರ ನಿಂತಿದೆ. ಕೂಲಿಕಾರರ ಕೂಲಿಯನ್ನು ಸಹ ಹಲವು ವರ್ಷಗಳು ಗತಿಸಿದ ಬಳಿಕ ನೀಡಲಾಗುತ್ತಿದೆ, ದೇಶದ ಕೃಷಿ ನಾಶಪಡಿಸಲು ತಂದಿದ್ದ ಮೂರು ಕಾನೂನುಗಳನ್ನು ಹಿಂದೆ ಪಡೆಯಲು ಕೇಂದ್ರ ವಿರುದ್ಧ ಗಡಿಯಲ್ಲಿ ಉಗ್ರ ಹೋರಾಟ ಮಾಡಬೇಕಾಯಿತು ಎಷ್ಟೋ ರೈತರು ಪ್ರಾಣತೆತ್ತರು, ಕೋಮು ದಳ್ಳುರಿ ಹೆಚ್ಚಿಸುವ ಇಂಥ ಸರಕಾರವ ಬೇಡವಾಗಿದ್ದು ಕಾಂಗ್ರೆಸ್ ಬಲ ತುಂಬಬೇಕಿದೆ ಎಂದರು.
ಬಡವರಿಗೆ, ಕೃಷಿ ಕೂಲಿಕಾರರಿಗೆ, ದಲಿತರಿಗೆ ದೇಶದ ಅರಣ್ಯ ಹಾಗು ಭು ಸಂಪತ್ತನ್ನು ಹಂಚುವ ಬದಲು ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದ್ದಾರೆ, ರೈಲ್ವೆ ಹಾಗು ರಸ್ತೆ ಸಾರಿಗೆಗಳನ್ನು ವರ್ಗೀಕರಣ ಮಾಡಿ ಕೂಲಿಕಾರರ ಪ್ರಯಾಣವನ್ನು ಕಠಿಣವಾಗುವಂತೆ ಮಾಡಲಾಗುತ್ತಿದೆ, ಬಿಜೆಪಿ ಸರಕಾರದ ಒಂದೇ ಭಾರತ್ ರೈಲು ಯಾರಿಗಾಗಿ ಕೂಲಿಕಾರರಿಗಂತೂ ಅಲ್ಲವೇ ಅಲ್ಲ, ಬೃಹತ್ ಕಂಪನಿಗಳಿಗೆ ಕಾಂಟ್ರಾಕ್ಟ್ ನೀಡಲು ಬೆದರಿಸಿ ಸಾವಿರಾರು ಕೋಟಿ ಹಣ ಎಲೆಕ್ಟ್ರೋ ಬಾಂಡ್ ಮೂಲಕ ಪಡೆಯಲಾಗುತ್ತಿದೆ, ಹೋರಾಟಗಾರರ ಹಕ್ಕು ಕಿತ್ತೊಗೆಯಲಾಗುತ್ತಿದೆ, ವಿ ಪಕ್ಷಗಳ ಹತ್ತಿಕ್ಕಲಾಗುತ್ತಿದೆ, ಸಂವಿಧಾನ ದುರ್ಬಲಗೊಳಿಸಿ ಪ್ರಜಾಪ್ರಭುತ್ವ ನಾಶ ಮಾಡಲಾಗುತ್ತಿದೆ ಹೀಗಾಗಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರನ್ನು ಈ ಲೋಕಸಭಾ ಚುನಾವಣೆಯಲ್ಲಿ ಕೃಷಿಕೂಲಿಕಾರರು ಬೆಂಬಲಿಸಿ ಗೆಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಚಂದ್ರಪ್ಪ ಹೊಸಕೇರಿ ಮನವಿ ಮಾಡಿದರು.
ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ್ ಮರುಕುಂಬಿ, ಉಪಾದ್ಯಕ್ಷ ಹುಸೇನಪ್ಪ ಕೆ, ಕಾರ್ಯದರ್ಶಿ ಸುಂಕಪ್ಪ ಗದಗ್, ಕುಷ್ಟಗಿ ತಾಲೂಕಾ ಸಂಚಾಲಕ ಬಸವರಾಜ್ ಮೇಳಿ ಇತರರಿದ್ದರು.
Comments are closed.