ಹಿಮೋಫಿಲಿಯಾ ಪೀಡಿತರಿಗೆ ಮಾಹಿತಿ ಕಾರ್ಯಕ್ರಮ
ಗಂಗಾವತಿ: ವಿಶ್ವ ಹಿಮೋಫಿಲಿಯಾ ದಿನದ ಅಂಗವಾಗಿ ಏ.೨೩ ಮಂಗಳವಾರ ಬೆಳಿಗ್ಗೆ ೧೦:೦೦ ಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಹಿಮೋಫೀಲಿಯ ಪೀಡಿತರಿಗೆ ಮಾಹಿತಿ ಶಿಬಿರ ನಗರದ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ತಾಲೂಕು ವೈದ್ಯಾಧಿಕಾರಿಗಳು ಹಾಗು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿರುವ ಡಾಕ್ಟರ್ ಈಶ್ವರ್ ಸವಡಿ ಇವರು ಹಿಮೋಫೀಲಿಯ ಪೀಡಿತರಿಗೆ ಸರ್ವ ಮಾಹಿತಿ ನೀಡಲಿದ್ದಾರೆ. ಅರ್ಥೋಪಿಡಿಕ್ ಡಾ.ರಾಮಕೃಷ್ಣ ಇವರು ಎಲುಬು ಮತ್ತು ಕೀಲುಗಳ ಬಗೆಗೆ ವಿವರ ನೀಡಲಿದ್ದು, ಚಿಕ್ಕ ಮಕ್ಕಳ ಹಿಮೋಫೀಲಿಯಾ ಕುರಿತು ಡಾ.ಅಂಬರೀಶ್ ಅರಳಿ ಮಾಹಿತಿ ಒದಗಿಸಲಿದ್ದಾರೆ, ಹಿಮೋಫೀಲಿಯಾ ಫಿಜಿಯೋ ಥೇರೇಪಿ ಕುರಿತು ನಯಿಮ್ ಮತ್ತು ಅಲಿಖಾನ್ ಹೇಳಿಕೊಡಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.
Comments are closed.