ನರೇಗಾ ಕಾಮಗಾರಿ ಸ್ಥಳದಲ್ಲಿ ಆಯುಕ್ತರ ಸಮ್ಮುಖದಲ್ಲಿ ಅಕುಶಲ ಕೂಲಿಕಾರರಿಗೆ ತಪ್ಪದೇ ಮತದಾನ ಮಾಡುವ ಪ್ರತಿಜ್ಞಾವಿಧಿ ಸ್ವೀಕಾರ

Get real time updates directly on you device, subscribe now.

ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ ಕುಮಾರ ಮಾಲಪಾಟಿ ಅವರು ಶನಿವಾರದಂದು ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ 2023-24 ಹಾಗೂ 2024-25ನೇ ಸಾಲಿನ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಕಾಮಗಾರಿಳನ್ನು ಪರಿಶೀಲಿಸಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದಿಂದ ಯಾರೂ ವಮಚಿತರಾಗಬಾರದು ಎಂದು ತಿಳಿಸಿದ ಆಯುಕ್ತರು, ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕೊಪ್ಪಳ ತಾಲ್ಲೂಕಿನ ಕಾಮಗಾರಿಗಳ ಪರಿಶೀಲನೆ
ಮಹಾತ್ಮ ಗಾಂಧಿ ನರೇಗಾದಡಿ ಅನುಷ್ಠಾನಗೊಂಡ ಮತ್ತು ಅನುಷ್ಠಾನಗೊಳ್ಳುತ್ತಿರುವ ಕೊಪ್ಪಳ ತಾಲ್ಲೂಕಿನ ಬಹದ್ದೂರಬಂಡಿ, ಬಿಸರಳ್ಳಿ, ಕೋಳೂರು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ್ ಕುಮಾರ್ ಮಾಲಪಾಟಿ ರವರು ಇಂದು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ಮಾಡಿದರು.
ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತ್ ಹೂವಿನಾಳ ರಸ್ತೆ ಬದಿ ನಾಲಾ ಹೂಳೆತ್ತುವ ಕಾಮಗಾರಿ, ಬಿಸರಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ  ಬಿಕನಳ್ಳಿ  ರಸ್ತೆ ಬದಿ ನೆಡುತೋಪು ಕಾಮಗಾರಿ, ಬಿಕನಳ್ಳಿ ಗ್ರಾಮದ ಬಸವರೆಡ್ಡಿ ಇವರ ಬಾಳೆತೋಟ, ಕೋಳೂರು ಗ್ರಾ.ಪಂ. ಕಾಟರಳ್ಳಿ ಶಾಲಾಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕುಕನೂರ ತಾಲೂಕಿನ ಕಾಮಗಾರಿಗಳ ಪರಿಶೀಲನೆ
ಕುಕನೂರು ತಾಲೂಕಿನ ರಾಜೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ 2023-24 ನೇ ಸಾಲಿನಲ್ಲಿ ಕೈಗೊಂಡ ನುಗ್ಗೆ ತೋಟ ಬೆಳೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ಮಾಡಿದರು. ನುಗ್ಗೆ ತೋಟ ಕಾಮಗಾರಿ ವೀಕ್ಷಣೆ ಮಾಡಿ ರೈತರೊಂದಿಗೆ ಸಂವಾದ ಮಾಡಿ ನರೇಗಾ ಯೋಜನೆಯಡಿ ನುಗ್ಗೆ ತೋಟ ಮಾಡಿದ್ದರಿಂದ ಆದ ಲಾಭಾಂಶದ ಬಗ್ಗೆ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ರೈತ ಮುತ್ತಣ್ಣ ಮಂಡಲಗೇರಿ ರವರು ಇದುವರೆಗೂ 50,000/- ವರೆಗೆ ಆದಾಯ ಬಂದಿದೆ, ಇನ್ನೂ ಕಟಾವು ಮಾಡುವುದು ಬಾಕಿ ಇದೆ ಎಂದು ಆಯುಕ್ತರಿಗೆ ಮಾಹಿತಿ ನೀಡಿದರು.
ಯಲಬುರ್ಗಾ ತಾಲೂಕಿನ ಕಾಮಗಾರಿಗಳ ಪರಿಶೀಲನೆ
ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾ.ಪಂ. ವ್ಯಾಪ್ತಿಯ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಕೂಲಿಕಾರರೊಂದಿಗೆ ಮಾಹಿತಿ ಪಡೆದ ಆಯುಕ್ತರು, ನರೇಗಾದಡಿ ಎಲ್ಲರೂ 100 ದಿನಗಳ ಕೆಲಸ ಪಡೆಯಬೇಕು. ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳಬೇಕು. ನರೇಗಾ ಯೋಜನೆಗೆ ಸಂಬAಧಿಸಿದAತೆ ಯಾವುದೇ ದೂರು ಅಥವಾ ಬೇಡಿಕೆಗಳಿದ್ದಲ್ಲಿ ಏಕೀಕೃತ ಸಹಾಯವಾಣಿ: 8277506000 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಬಳಿಕ ಬೇವೂರ ಗ್ರಾಮದ ಕೂಸಿನ ಮನೆಗೆ ಭೇಟಿ ನೀಡಿದ ಆಯುಕ್ತರಿಗೆ ಕೂಸಿನ ಮನೆ ಮಕ್ಕಳಿಂದ ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು. ಕೂಸಿನ ಮನೆಯ ಮಕ್ಕಳ ಆಟ ನೋಡಿದ ಅವರು ಮಕ್ಕಳ ಹಾಜರಾತಿ, ರಿಜಿಸ್ಟರ್ ಗಳನ್ನು ಪರಿಶೀಲಿಸಿದರು.
ನಂತರ ಬೇವೂರ ಗ್ರಾಮದ ರೈತರೊಬ್ಬರು ಬೆಳೆದ ರೇಷ್ಮೆ ಬೆಳೆಯನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು. ಬಳಿಕ ಮುರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ನರೇಗಾದಡಿ ಸೌಲಭ್ಯ ಪಡೆದು ಪಪ್ಪಾಯಿ ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ, ಪಪ್ಪಾಯಿ ಬೆಳೆ ಪರಿಶೀಲಿಸಿದರು.
ಕುಷ್ಟಗಿ ತಾಲೂಕಿನ ಕಾಮಗಾರಿಗಳ ಪರಿಶೀಲನೆ
2023-24 ಮತ್ತು 2024-25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆನಕನಾಳ ಗ್ರಾಮದ ಸರಕಾರಿ ಶಾಲೆಯ ಶಾಲಾ ತಡೆ ಗೋಡೆ ಹಾಗೂ ಹನುಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಸಾಗರ ಗ್ರಾಮದ ಅಂಗನವಾಡಿ ಕೇಂದ್ರ ಹಾಗೂ ಕೂಸಿನ ಮನೆ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ಪರಿಶೀಲಿಸಿದರು.
ಈ ಸಂದರ್ಭ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ದಿಡ್ಡಿಮನಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗಳಾದ  ಮಲ್ಲಿಕಾರ್ಜುನ್ ತೊದಲಬಾಗಿ, ತೋಟಗಾರಿಕೆ ಉಪ ನಿರ್ದೇಶಕರು, ಯೋಜನಾ ಅಭಿಯಂತರರು, ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆ ಅಧಿಕಾರಿಗಳು, ಜಿಪಂ, ತಾಪಂ  ನರೇಗಾ ಸಿಬ್ಬಂದಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!