ಸಂಗಣ್ಣ ಕರಡಿಯಿಂದ ಕಾಂಗ್ರೆಸ್‌ಗೆ ಬಲ- ಕೆ.ಬಸವರಾಜ ಹಿಟ್ನಾಳ್
ಕೊಪ್ಪಳ: ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕರಾದ ಸಂಗಣ್ಣ ಕರಡಿ ಅವರ ಮನೆಗೆ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ಭೇಟಿ ನೀಡಿದರು.
ಶನಿವಾರ ಬೆಳಗ್ಗೆ ಮಾಜಿ ಸಂಸದ ಸಂಗಣ್ಣ ಕರಡಿ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್, ಸಂಗಣ್ಣ ಕರಡಿ, ಹಿಟ್ನಾಳ್ ಪರ ಜೈಕಾರ ಕೂಗಿದರು.
ಸಂಗಣ್ಣ ಕರಡಿ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರ ಸೇರಿ ಮತ್ತಿತರ ವಿಷಯಗಳನ್ನು ಚರ್ಚೆ ನಡೆಸಿದರು.
ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಸಂಗಣ್ಣ ಅವರು, ಕೊಪ್ಪಳ ಕಾಂಗ್ರೆಸ್ ಭದ್ರಕೋಟೆಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರೆಂಟಿ ಯಶಸ್ವಿ ಬಗ್ಗೆ ತಿಳಿಸಿ ಮತ ಹಾಕುವಂತೆ ಮನವೊಲಿಸಬೇಕು. ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಮಟ್ಟಡ ಗ್ಯಾರೆಂಟಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ರಾಜ್ಯದಲ್ಲಿ ಪ್ರತಿ ಕುಟುಂಬವು ಗ್ಯಾರೆಂಟಿ ಯೋಜನೆಯ ಲಾಭ ಪಡೆದಿದೆ. ದೇಶದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿ ವಿಸ್ತರಣೆಯಾಗಲಿದೆ ಎಂದರು.
ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್ ಮಾತನಾಡಿ, ಮಾಜಿ ಸಂಸದ ಸಂಗಣ್ಣ ಅವರು ಕಾಂಗ್ರೆಸ್ ಗೆ ಬಂದಿರುವುದರಿಂದ ಪಕ್ಷಕ್ಕೆ ಬಲ ಬಂದಂತಾಗಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಸಂಗಣ್ಣ ಕರಡಿ ಅಭಿಮಾನಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಪಕ್ಷ ಸೇರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿ ಮತ್ತಿತರರಿದ್ದರು.
–ಬಾಕ್ಸ್–
ಕಾಂಗ್ರೆಸ್ ಕಾರ್ಯಕರ್ತರಿಂದ ಸಂಗಣ್ಣ ಕರಡಿ ಅವರಿಗೆ ಸನ್ಮಾನ:-
ಮಾಜಿ ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾದ ಹಿನ್ನೆಲೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಹಾಲವರ್ತಿ, ಗಣೇಶ ನಗರ ಸೇರಿ ಮತ್ತಿತರ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಸಂಗಣ್ಣ ಕರಡಿ ಅವರನ್ನು ಸನ್ಮಾನಿಸಿ ಬರಮಾಡಿಕೊಂಡರು.
ಕೊಪ್ಪಳ ನಗರದ ಮಾಜಿ ಸಂಸದ ಸಂಗಣ್ಣ ಕರಡಿ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತರು ಶಾಲು ಹೊದಿಸಿ, ಹಾರ ಹಾಕಿ ಬರ ಮಾಡಿಕೊಂಡರು. ಗಣೇಶ್ ನಗರದ ಮಾಜಿ ನಗರಸಭೆ ಸದಸ್ಯ ಜಾಕೀರ್ ಹುಸೇನ್ ಕಿಲ್ಲೇದಾರ್, ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜ ಚಳೊಳ್ಳಿ, ವಾಲ್ಮೀಕಿ ಸಮಾಜದ ಮುಖಂಡರಾದ ಶಂಕರ್ ಪೂಜಾರ್, ಬಿಲ್ ಕಲೆಕ್ಟರ್ ರಫಿಕ್, ಸಾದಿಕ್ ಅಲಿ ಕಿಲ್ಲೆದಾರ್ , ಯಾಸಿನ್ ಬನ್ನಿಕೊಪ್ಪ, ಮುಜ್ಜು ಕಿಲ್ಲೆದಾರ್, ಮಹಮದ್ ಫಯಿದ್, ರಿಯಾನ್ ಸೇರಿ ಮತ್ತಿತರರಿದ್ದರು.
–ಕೋಟ್–
ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಗೆ ಬಂದಿದ್ದು ಅಳವಂಡಿ ಹೋಬಳಿ ವ್ಯಾಪ್ತಿಯಲ್ಲಿ ಆನೆ ಬಲ ತಂದಂತಾಗಿದೆ. ಇವರ ಆಗಮನದಿಂದ ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಬರುವುದು ಶತಸಿದ್ಧ.
- ಭರಮಪ್ಪ ಹಟ್ಟಿ, ಮಾಜಿ ಜಿಪಂ ಉಪಾಧ್ಯಕ್ಷ.
Comments are closed.