ಕೊನೆಯ ದಿನ 10 ಅಭ್ಯರ್ಥಿಗಳಿಂದ ನಾಮಪತ್ರಗಳ ಸಲ್ಲಿಕೆ
ಲೋಕಸಭಾ ಚುನಾವಣೆ:
ಕೊಪ್ಪಳ, ): ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ನಾಮ ಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಂದ ಚುನಾವಣಾ ನಾಮಪತ್ರಗಳನ್ನು ಸ್ವೀಕರಿಸಿದರು.
8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಏಪ್ರಿಲ್ 12 ರಿಂದ ಆರಂಭವಾಗಿದ್ದು, ಶುಕ್ರವಾರದಂದು ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಜಶೇಖರ ಕುಯ್ಯಪ್ಪನವರ, ಆಲ್ ಇಂಡಿಯಾ ಉಲಮಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಮಜಾನಬಿ, ದೇಶ ಪ್ರೇಮ ಪಾರ್ಟಿಯ ಅಭ್ಯರ್ಥಿಯಾಗಿ ಬಸವರಾಜ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ) ಅಭ್ಯರ್ಥಿಯಾಗಿ ಸಿ.ಶರಣಬಸಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಮಹ್ಮದ್ ಸಲ್ಮಾನ್, ಕರಿಂಪಾಶಾ, ಗುಡದಪ್ಪ, ಮಲ್ಲಪ್ಪ, ಪ.ಯ ಗಣೇಶ ಮತ್ತು ನಾಗರಾಜ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದು, ಈ ಹತ್ತು ಅಭ್ಯರ್ಥಿಗಳಿಂದ ಒಟ್ಟು 10 ಚುನಾವಣಾ ನಾಮಪತ್ರಗಳು ಕೊನೆಯ ದಿನ ಸಲ್ಲಿಕೆಯಾಗಿವೆ.
Comments are closed.