ಮೋದಿಯವರಿಂದ ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ : ಕ್ಯಾವಟರ್ 

Get real time updates directly on you device, subscribe now.

ಕೊಪ್ಪಳ: ಪ್ರಧಾನಿ ಮೋದಿ ಸ್ವಚ್ಛ ಹಾಗೂ ಸುಭದ್ರ ಆಡಳಿತದಿಂದ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೆ ಶರಣಪ್ಪ ಅಭಿಪ್ರಾಯಪಟ್ಟರು.
ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ಯ ನರೇಗಲ್, ಯತ್ನಟ್ಟಿ ಹಾಗೂ ಟಣಕನಕಲ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು
ಮೋದಿಯವರ ನೇತೃತ್ವದಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ದೇಶವು ಅಭಿವೃದ್ಧಿ ಕಾಣುತ್ತಿದೆ.  ಹಲವು ರೀತಿಯ ಜನಹಿತಕಾರಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸರ್ವರಿಗೂ ಸಮಪಾಲು ಎಂಬ ಉದ್ದೇಶ ವಿಟ್ಠು ಕೊಂಡು ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರ ಸ್ಫೂರ್ತಿಯಿಂದ ಸಾಮಾಜಿಕ ಕಳಕಳಿ, ಚಿಂತನೆ ಮತ್ತು ಕನಸು ಹೊತ್ತುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸೇವೆ ಮಾಡಲು ಅವಕಾಶ ನೀಡಬೇಕೆಂದು ಮತಯಾಚನೆ ಮಾಡಿದರು.
ಜೆಡಿಎಸ್ ಮುಖಂಡ ಸಿ ವಿ ಚಂದ್ರಶೇಖರ್ ಮಾತನಾಡಿ ಮುಂದಿನ ಮಕ್ಕಳ ಕಲ್ಯಾಣ ಮತ್ತು ಭವಿಷ್ಯಕ್ಕಾಗಿ ಮೋದಿ ಅವರು ಗೆಲ್ಲಿಸಿಬೇಕು ಎಂದರು. ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಯುವಕರು ಈ ಕುರಿತಾಗಿ ಹೆಚ್ಚಿನ ಚಿಂತನೆ ಅಗತ್ಯ ಎಂದು ಹೇಳಿದರು
ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಚಾಲಕ ಪ್ರದೀಪ್ ಹಿಟ್ನಾಳ್, ಜೆಡಿಎಸ್ ಮುಖಂಡ ಸಿ ವಿ ಚಂದ್ರಶೇಖರ್, ಪಿ ಬಿ ಹಿರೇಮಠ್,ಶಿವಶಂಕರ್, ಚನ್ನಬಸವ ಗಾಳಿ, ಶಾಂತವೀರಯ್ಯ, ವಿರುಪಾಕ್ಷಗೌಡ, ರಾಜಶೇಖರ್ ಗೌಡ, ಪ್ರಭುಗೌಡ, ಗವಿಸಿದ್ದಪ್ಪ ಬಿಸರಳ್ಳಿ, ಶಿವಯೋಗಿ ಕೊಡದಾಳಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!