ಹನುಮ ಮಾಲಾ ಧರಿಸಿದ ಶಿವರಾಜ್ ತಂಗಡಗಿ
ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಕಾರ್ಯಕರ್ತರೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ ತಂಗಡಗಿ ಹನುಮ ಮಾಲಾ ಧರಿಸಿದರು. ಕೊಪ್ಪಳದ ಕಾರಟಗಿ ತಾಲೂಕಿನ ಯರಡೋಣಿ ಗ್ರಾಮದ ಮೂಡಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕರ್ತರೊಂದಿಗೆ ಹನುಮ ಮಾಲಾ ಧರಣೆ ಮಾಡಿದ ತಂಗಡಗಿ ಐದು ದಿನಗಳ ಕಾಲ ಹನುಮ ಮಾಲಾ ಧರಿಸಿ ಆಂಜನೇಯನ ವ್ರತ ಮಾಡಲಿದ್ದಾರೆ. ಐದನೇ ದಿನ ಹನುಮ ಜನ್ಮಸ್ಥಳ ಅಂಜನಾದ್ರಿಯಲ್ಲಿ ಹನುಮ ಮಾಲಾ ವಿಸರ್ಜನೆ ಮಾಡಲಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಗೂ ಮುನ್ನವೇ ಹನುಮ ಮಾಲಾ ಧರಿಸಿದ್ದ ತಂಗಡಗಿ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ್ದರು. ಇದೀಗ ಲೋಕಸಭಾ ಚುನಾವಣೆ ಮುನ್ನ ಮತ್ತೆ ಹನುಮ ಮಾಲಾ ಧರಿಸಿದ್ದಾರೆ. ಆಂಜನೇಯನ ಆಶಿರ್ವಾದ ಸದಾ ನಮ್ಮ ಮೇಲೆ ಇದೆ ಈ ಬಾರಿ ಗೆಲುವು ನಮ್ಮದೇ ಎನ್ನುತ್ತಾರೆ.
Comments are closed.