ಫಯಾಜ್ ಗೆ ಗಲ್ಲು ಶಿಕ್ಷೆಯಾಗಲಿ- ಕ್ಯಾವಟರ್

0

Get real time updates directly on you device, subscribe now.

ನಿಷ್ಪಕ್ಷಪಾತ ತನಿಖೆಯಾಗಲಿ  
ಕೊಪ್ಪಳ: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಅವರ ಹತ್ಯೆ ಅತ್ಯಂತ ದುರಾದೃಷ್ಟಕರ ಸಂಗತಿ. ಈ ಘಟನೆ ಖಂಡನಾರ್ಹ. ರಾಜ್ಯ ಸರ್ಕಾರ ಆರೋಪಿಯನ್ನು ಧರ್ಮದ ಆಧಾರದ ಮೇಲೆ ನೋಡದೆ ಆತ ಮಾಡಿರುವ ತಪ್ಪಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್  ಒತ್ತಾಯಿಸಿದ್ದಾರೆ.
ಸಹೋದರಿ ನೇಹಾ ಹಿರೇಮಠ ಅವಳ ಆತ್ಮಕ್ಕೆ ಶಾಂತಿ ದೊರೆಯಲಿ.  ಆರೋಪಿ ಫಯಾಜಗೆ ಗಲ್ಲುಶಿಕ್ಷೆಯಾಗಬೇಕು ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಸಹೋದರಿ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ಎಬಿವಿಪಿ ಹುಬ್ಬಳ್ಳಿ ಬಂದ್ ಘೋಷಿಸಿದ್ದು, ಇದಕ್ಕೆ ನನ್ನ ಬೆಂಬಲವೂ ಇದೆ. ಇಂತಹ ಘಟನೆಯಿಂದ ಸಮಾಜದಲ್ಲಿ ಶಾಂತಿ, ಭಾತೃತ್ವ ಭಾವನೆ ಕದಡುವ ಕೆಲಸವಾಗುತ್ತಿದೆ. ಇದಕ್ಕೆ ಬಿಜೆಪಿ ಅವಧಿಯಲ್ಲಿ ತಂದ ಕಠಿಣ ಕ್ರಮ ಕೈಗೊಳ್ಳಬೇಕು. ಹತ್ಯೆಯಲ್ಲಿ ಯಾರೂ ರಾಜಕೀಯ ಮಾಡದೇ ಸಹೋದರಿ ಹತ್ಯೆಗೆ ನ್ಯಾಯ ದೊರಕಿಸಿಕೊಡಬೇಕು ಎಂದಿದ್ದಾರೆ.
ಕೊಪ್ಪಳ: ಭಾಗ್ಯನಗರದ ಬಿಜೆಪಿ ಕಾರ್ಯಕರ್ತ  ಪರುಶುರಾಮ, ಪತ್ನಿ ಲಕ್ಷ್ಮಿ ಹಾಗೂ ಮಗಳು ಆಕಾಂಕ್ಷ ಕೊಲೆಯಾಗಿದ್ದು, ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.
ಹೋಟೆಲ್ ಉದ್ಯಮಿಯಾಗಿದ್ದ ಪರಶುರಾಮ್ ಅವರು, ಬಿಜೆಪಿಯಿಂದ ಎರಡು ಬಾರಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿ  ಪರಾಭವಗೊಂಡಿದ್ದರು. ಅವರು ಬಿಜೆಪಿ ಕಟ್ಟಾಳು ಆಗಿದ್ದರು. ಅವರ ಹತ್ಯೆ ಖಂಡನೀಯ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: