ಹಳ್ಳಿ ಹಳ್ಳಿಗಳಲ್ಲಿ ಮತ್ತೊಮ್ಮೆ ಮೋದಿ ಸಂಕಲ್ಪ- ಡಾ.ಬಸವರಾಜ ಕ್ಯಾವಟರ್ ವಿಶ್ವಾಸ
ಮಸ್ಕಿ: ಹಳ್ಳಿ ಹಳ್ಳಿಗಳಲ್ಲಿ ಮೋದಿ ಮತ್ತೊಮ್ಮೆ ಎಂಬ ಸಂಕಲ್ಪ ಧೃಡವಾಗಿದೆ. ಆದ್ದರಿಂದ ಮೂರನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ವಿಶ್ವಾಸ ವ್ಯಕ್ತಪಡಿಸಿದರು.
ಬಳಗಾನೂರಿನ ದೇವಾಂಗ ಸಮುದಾಯ ಭವನದಲ್ಲಿ ನಡೆದ ಬಳಗಾನೂರು ಪಟ್ಟಣ ಮತ್ತು ಗೌಡನಬಾವಿ ಪಂಚಾಯತಿ ವ್ಯಾಪ್ತಿಯ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ನೀಡಿರುವ ಜನಪರ ಯೋಜನೆಗಳು ಜನತೆಯ ಹೃದಯದಲ್ಲಿ ಸ್ಥಾನ ಪಡೆದಿವೆ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಸ್ವಚ್ಚ, ಸಧೃಡ ಆಡಳಿತಕ್ಕೆ ಕೊಪ್ಪಳ ಲೋಕಸಭಾ ಕ್ಷೇತ್ರದ ಜನತೆಯೂ ಆಶೀರ್ವಾದ ಮಾಡಲಿದ್ದಾರೆ ಎಂಬುದನ್ನು ಸ್ವತಃ ಜನರೇ ನನ್ನಲ್ಲಿ ತಿಳಿಸಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತ ಜನರು ಮೆಚ್ಚಿದ್ದಾರೆ. ಮತ್ತೊಮ್ಮೆ ಅವರ ನೇತೃತ್ವದ ಸರ್ಕಾರ ಬರಬೇಕು ಎಂದು ಬಯಸಿದ್ದಾರೆ. ನಿಮ್ಮ ಮನೆಯ ಮಗನಾದ ನನಗೆ ಮತ ಹಾಕುವ ಮೂಲಕ ಮೋದಿಯವರ ಕೈ ಬಲ ಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಮಂಡಲದ ಅಧ್ಯಕ ಶರಣಬಸವ ಸೊಪ್ಪಿಮಠ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಿವರಾಮೇಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಲೋಕಸಭಾ ಸಂಚಾಲಕ ಹೆಚ್.ಗಿರಿಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ಜೆ.ಡಿ.ಎಸ್ ಮುಖಂಡ ರಾಘವೇಂದ್ರ ನಾಯಕ, ಜೆ.ಡಿ.ಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬಾವಿಕಟ್ಟಿ, ಬಿಜೆಪಿ ಓ.ಬಿ.ಸಿ ಮೋರ್ಚಾ ಅಧ್ಯಕ್ಷ ಅಮರೇಶ ಗುರಿಕಾರ, ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ರವಿ ಬಳಗಾನೂರ, ಮುಖಂಡರಾದ ಅಜಯ ಉದ್ಬಾಳ, ದೊಡ್ಡಮೌನೇಶ ಗೌಡ, ಭೀಮಣ್ಣ ಬಡಿಗೇರ, ಡಾ.ಬಸಲಿಂಗಪ್ಪ, ಹೆಚ್ ಮಹಾಬಲೇಶ, ವೀರಣ್ಣರವರು ಉಪಸ್ಥಿತರಿದ್ದರು.
One attachment • Scanned by Gmail
Comments are closed.