ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ- ಶಾಸಕ ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಪೂಜೆಗಾಗಿ ಕಾಯದೆ ಅಗತ್ಯ ಕಾಮಗಾರಿಗಳನ್ನು ಶುರು ಮಾಡಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇಂದು ಕೊಪ್ಪಳದ ಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಅದರಲ್ಲೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಘಟಿಸಿರುವಂಥಹ ಅವಘಡಗಳು ಸಂಭವಿಸಬಾರದು. ಕುಡಿಯುವ ನೀರಿನ ಜೊತೆಗೆ ಕಲುಷಿತ ನೀರು ಸೇರದಂತೆ ನೋಡಕೊಳ್ಳಬೇಕು. ಎಚ್ಚರಿಕೆಯನ್ನು ವಹಿಸಬೇಕು, ಎಲ್ಲೆಲ್ಲಿ ಬೋರ್ವೆಲ್ ಹಾಕುವ ಅವಶ್ಯಕತೆ ಇದೆಯೋ ಅಲ್ಲಿ ಬೋರವೆಲ್ ಗಳನ್ನು ಹಾಕಬೇಕು ಮತ್ತು ಕುಡಿಯುವ ನೀರಿನ ಕುರಿತು ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು ಎಂದು ಹೇಳಿದರು.
ಇಡೀ ಜಿಲ್ಲೆಯಲ್ಲಿಯೇ ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೊಪ್ಪಳ ತಾಲೂಕು ಮೊದಲ ಸ್ಥಾನದಲ್ಲಿ ಬರುವಂತೆ ನೋಡಿಕೊಳ್ಳಬೇಕು ರಾಜ್ಯಮಟ್ಟದಲ್ಲಿಯೇ ಉತ್ತಮ ಫಲಿತಾಂಶ ಬರುವಂತಾಗಬೇಕು. ಚಿತ್ರದುರ್ಗ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕೈಗೊಳ್ಳಲಾದ ಕ್ರಮಗಳ ಅಧ್ಯಯನ ಮಾಡಿ ನಮ್ಮ ತಾಲೂಕಿನಲ್ಲೂ ಅಂತಹ ಫಲಿತಾಂಶ ಬರುವಂತಾಗಬೇಕು. ಬಿಇಓ ಶಾಲೆಗಳಿಗೆ ಆಗಾಗ ಭೇಟಿ ನೀಡಬೇಕು. ಅಧಿಕಾರಿಗಳ ಕುರಿತು ಶಿಕ್ಷಕರಿಗೆ ಭಯವೇ ಇಲ್ಲದಂತಾಗಿದೆ. ಬರ್ತಾರೆ ಚಹಾ ಕುಡಿದು ಹೋಗ್ತಾರೆ ಎನ್ನುವಂತಹ ಮನಸ್ಥಿತಿ ಇದೆ. ಇದನ್ನು ಹೋಗಲಾಡಿಸಬೇಕು ನಿರಂತರವಾಗಿ ಶಾಲೆಗಳಿಎ ಭೇಟಿ ನೀಡಿ ಶಾಲೆ ಗುಣಮಟ್ಟ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವಂತಹ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು. ಜೊತೆಗೆ ಯಾವ ಶಾಲೆಗಳಲ್ಲಿ ಅಡುಗೆಕೋಣೆ, ಭೋಜನಾಲಯಗಳು ಇಲ್ಲವೋ ಅಲ್ಲಿ ಭೋಜನಾಲಯಗಳನ್ನು ಕಟ್ಟಬೇಕಾಗಿದ್ದು 175 ಬೋಜನ ಆಲಯಗಳನ್ನು ನಿರ್ಮಿಸಲು ಸಹ ಈ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು ಅದಕ್ಕೆ ಬೇಕಾದಂತಹ ಯೋಜನಾ ವರದಿ ಸಿದ್ದಪಡಿಸಲು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು , ತಹಶೀಲ್ದಾರ ಅಮರೇಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.