ಸರ್ವ ವೃತ್ತಿಪರರ ಬೆಂಬಲ ಅಗತ್ಯ- ಕ್ಯಾವಟರ್

Get real time updates directly on you device, subscribe now.

ಗಂಗಾವತಿ:
ಸದೃಢ, ವಿಕಸಿತ ಕೊಪ್ಪಳ ಲೋಕಸಭಾ ಕ್ಷೇತ್ರದ ನಿರ್ಮಾಣಕ್ಕೆ ಸರ್ವ ವೃತ್ತಿಪರರ ಬೆಂಬಲ ಅಗತ್ಯ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು.
ತಾಲೂಕಿನ ವಕೀಲರ ಸಂಘಕ್ಕೆ ಗುರುವಾರ ಭೇಟಿ ನೀಡಿದ ಅವರು,  ಮುಂಬರುವ ಲೋಕಸಭಾ ಚುನಾವಣೆಗೆ ಸಹಕಾರ ಕೋರಿದರು.
ವೃತ್ತಿಪರರಿಗೆ ಕೇಂದ್ರ ಬಿಜೆಪಿ ಸರ್ಕಾರವು ಹಲವಾರು ಅನುಕೂಲಗಳನ್ನು ಕಲ್ಪಿಸಿದೆ. ಅವರು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದು, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡುವ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ನಿಮ್ಮ ಆಶೀರ್ವಾದದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ. ಬಿಜೆಪಿಗೆ ಮತ ಹಾಕಿ ಹಾಗೂ ಹಾಕಿಸುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕಾರಣೀಕರ್ತರಾಗಬೇಕು ಎಂದರು.
ಇದೇ ವೇಳೆ ವಕೀಲರ ಸಂಘದಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮಸಾಲೆ, ಉಪಾಧ್ಯಕ್ಷ ಹೆಚ್.ಎಂ.ಮಂಜುನಾಥ, ಕಾರ್ಯದರ್ಶಿ ಚನ್ನಪ್ಪ ಮಾಳಗಿ,  ಎಸ್.ಕೆ.ದಂಡಿನ ಯಾದವರವರು,  ಹಾಲಸಮುದ್ರ, ಎ.ಆರ್.ದೇಶಪಾಂಡೆ, ಪ್ರೇಮಮೂರ್ತಿ ಹಿರೇಮಠ, ಹೆಚ್‌.ಗಿರಿಗೌಡ, ನಾಗರಾಜ ಗೌಳಿ,  ಭೂಸನೂರ ಮಠ, ರಾಘವೇಂದ್ರ ಪಾನಗಂಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!